ಬದಿಯಡ್ಕ: ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆ ನೀರ್ಚಾಲು ಪ್ರಧಾನ ಕಚೇರಿಯ ಸಭಾ ಭವನದಲ್ಲಿ ಜರಗಿತು. ಮಾರ್ಚ್ 31ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ 222.85 ಕೋಟಿ ರೂಪಾಯಿಗಳ ಒಟ್ಟು ವ್ಯವಹಾರವನ್ನು ನಡೆಸಿ 34.67 ಲಕ್ಷ ರೂ.ಗಳ ನಿರ್ವಹಣಾ ಲಾಭವನ್ನು ಬ್ಯಾಂಕ್ ಗಳಿಸಿದ್ದು, ಸದಸ್ಯರಿಗೆ 10 ಶೇಕಡಾ ಲಾಭಾಂಶ ವನ್ನು ಘೋಷಿಸಲಾ ಯಿತು. ಅಧ್ಯಕ್ಷ ಗಣಪತಿಪ್ರಸಾದ ಕುಳಮರ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ಅಜಿತ ಕುಮಾರಿ ವಾರ್ಷಿಕ ವರದಿ,ಲೆಕ್ಕಪತ್ರ ಮಂಡಿಸಿ ದರು. ನಿರ್ದೇಶಕರಾದ ಸುಬ್ರಹ್ಮಣ್ಯ ಭಟ್ ಏನಂಕೂಡ್ಲು, ರವಿ ಕೆ ನೀರ್ಚಾಲು, ಕೃಷ್ಣ ಭಟ್ ವಳಕ್ಕುಂಜ, ಶ್ಯಾಮ ಭಟ್ ಮಲ್ಲಡ್ಕ, ರಮ್ಯಾ ದರ್ಭೆತ್ತಡ್ಕ, ಸ್ಮಿತಾ ಬೇಳ, ವಿದ್ಯಾಶಂಕರಿ ವಾಶೆ, ಅಜೇಯ ಶಂಕರ ಖಂಡಿಗೆ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರಾದ ಶ್ರೀಕೃಷ್ಣ ಭಟ್ ವಾಶೆಮನೆ, ಕೋರಿಕ್ಕಾರು ವಿಷ್ಣು ಭಟ್, ಜಯದೇವ ಖಂಡಿಗೆ ಮಾತಾಡಿದರು. ಉಪಾಧ್ಯಕ್ಷ ಅವಿನಾಶ್ ರೈ ಬದಿಯಡ್ಕ ಸ್ವಾಗತಿಸಿ, ನಿರ್ದೇಶಕ ರಾಮಪ್ಪ ಮಂಜೇಶ್ವರ ವಂದಿಸಿದರು.
