ಕಾಸರಗೋಡು: ಕಬ್ಬಿಣ ನಿರ್ಮಿತವಾದ ಕೋಳಿಗೂಡಿಗೆ ನುಗ್ಗಿದ ಹೆಬ್ಬಾವು ಕೋಳಿ ಮರಿಗಳನ್ನು ನುಂಗಿದ್ದು, ಕೊನೆಗೆ ಅರಣ್ಯಪಾಲಕರು ಸ್ಥಳಕ್ಕೆ ಆಗಮಿಸಿ ಅದನ್ನು ಸೆರೆ ಹಿಡಿದ ಘಟನೆ ನಿನ್ನೆ ನಡೆದಿದೆ.
ಪೊಯಿನಾಚಿಗೆ ಸಮೀಪದ ಬಾರ ಅಡ್ಕತ್ತಬೈಲು ಪೂಕುನ್ನದ ಕೆ. ಪ್ರತಾಪನ್ ನಾಯರ್ ಮನೆ ಪಕ್ಕದ ಕೋಳಿಗೂಡಿಗೆ ಮುಂ ಜಾನೆ ವೇಳೆ ಹೆಬ್ಬಾವು ನುಗ್ಗಿದೆ. ಆಗ ಕೋಳಿಗಳು ಅಸಾಧಾರ ಣವಾಗಿ ಕೂಗುತ್ತಿದ್ದುದನ್ನು ಗಮನಿಸಿದ ಮನೆಯವರು ಹೊರಗೆ ಬಂದು ನೋಡಿದಾಗ ಆ ಗೂಡಿನ ಕಬ್ಬಿಣದ ಸರಳುಗಳ ಎಡೆಯಿಂದ ಹೆಬ್ಬಾವೊಂದು ಕೋಳಿ ಗೂಡಿಗೆ ನುಗ್ಗಿ ಕೋಳಿ ಮರಿಗಳನ್ನು ನುಂಗುತ್ತಿದ್ದ ದೃಶ್ಯ ಪತ್ತೆಯಾಗಿದೆ. ತಕ್ಷಣ ನೀಡಿದ ಮಾಹಿತಿಯಂತೆ ಅರಣ್ಯ ಇಲಾ ಖೆಯ ಹಾವುಹಿಡಿತಗಾರ ಮೊಹ ಮ್ಮದ್ ಅರಮಂಗಾನ ಸ್ಥಳಕ್ಕಾ ಗಮಿಸಿ ಹೆಬ್ಬಾವನ್ನು ಸೆರೆ ಹಿಡಿದು ಕಾಡಿಗಟ್ಟಿದರು. ಆ ಮೂಲಕ ಮನೆಯವರಲ್ಲಿ ಆವರಿಸಿದ ಭೀತಿಯನ್ನು ನಿವಾರಿಸಿದರು.