ಮಂಜೇಶ್ವರ: ಜೂನ್ ತಿಂಗಳಲ್ಲಿ ಭಾರೀ ಮಳೆಗೆ ರಸ್ತೆ ಕುಸಿದು ವಾಹನ ಗಳ ಸಂಚಾರಕ್ಕೆ ತಡೆ ಉಂಟಾಗುತ್ತಿ ದ್ದರೂ ಇನ್ನೂ ಇಲಾಖೆ ಅಧಿಕಾರಿಗಳು ದುರಸ್ತಿಗೆ ಕ್ರಮಕೈಗೊಳ್ಳದಿರುವುದು ವಾಹನ ಸವಾರರಲ್ಲಿ ಭೀತಿ ಹೆZ್ಚಸಿದೆ. ಮೀಂಜ ಪಂಚಾಯತ್ ವ್ಯಾಪ್ತಿಗೊಳ ಪಟ್ಟ ಲೋಕೋಪಯೋಗಿ ಇಲಾ ಖೆಯ ಹೊಸಂಗಡಿ-ಮೀಯಪದವು ರಸ್ತೆಯ ಮಜಿಬೈಲ್ ತಿರುವಿನಲ್ಲಿ ರಸ್ತೆ ಕುಸಿದು ಆತಂಕದ ಸ್ಥಿತಿ ಉಂಟಾಗಿದೆ. ಜೂನ್ ತಿಂಗಳಲ್ಲಿ ಆರಂಭದ ಭಾರೀ ಮಳೆಗೆ ರಸ್ತೆ ಒಂದು ಬದಿ ಕುಸಿದು ಬಿದ್ದಿದ್ದು, ಬಳಿಕ ಕ್ರಮೇಣ ಅಡಿಭಾಗದ ಮಣ್ಣು ಕೊರೆದು ಇದೀಗ ಅರ್ಧರಸ್ತೆ ಕುಸಿದು ಹೋಗಿ ಬಸ್ ಸಹಿತ ಇತರ ದೊಡ್ಡ ವಾಹನಗಳಿಗೆ ಸಂಚರಿಸಲು ಅಸಾಧ್ಯವಾಗುತ್ತಿದೆ. ಮುಂದೆ ಯಾವು ದೇ ಕ್ಷಣದಲ್ಲಿ ಇನ್ನಷ್ಟು ಕುಸಿದು ಬಿದ್ದಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಮೊಟಕುಗೊಳ್ಳಲಿದೆ. ಈ ಹಿಂದೆ ಸ್ಥಳಕ್ಕೆ ಅಧಿಕಾರಿಗಳು ತಲುಪಿ ಪರಿಶೀಲಿಸಿ ಅಪಾಯದ ಸೂಚನೆಯ ನಾಮಫಲಕವನ್ನು ಮಾತ್ರ ಇಟ್ಟು ಹೋಗಿದ್ದು, ದುರಸ್ತಿಗೊಳಿಸಲು ಮುಂದಾಗಲಿಲ್ಲವೆAದು ಸಾರ್ವ ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯಲ್ಲಿ ನಿರ್ಮಾಣಗೊಂಡ ಬೃಹತ್ ಹೊಂಡದ ಪರಿಸರದಲ್ಲಿ ಭದ್ರತೆಯನ್ನು ಮಾಡದ ಹಿನ್ನೆಲೆಯಲ್ಲಿ ರಾತ್ರಿ ಕಾಲ ವಾಹನಗಳು ಈ ಹೊಂಡ ಗಮನಕ್ಕೆ ಬಾರದೆ ಬಿದ್ದು ಅಪಘಾತ ಸಂಭವಿಸಬಹುದಾಗಿದೆ. ಕೂಡಲೇ ರಸ್ತೆ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
