ರಾಷ್ಟ್ರೀಯ ಹೆದ್ದಾರಿ ಬದಿ ಗಾಂಜಾ ಗಿಡ ಪತ್ತೆ

ಕುಂಬಳೆ: ಒಂದು ಮೀಟರ್‌ನಷ್ಟು ಎತ್ತರವುಳ್ಳ ಗಾಂಜಾ ಗಿಡ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬೆಳೆಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಸಮೀಪದ ಟ್ರಕ್ ಪಾರ್ಕಿಂಗ್ ಏರಿಯಾದಲ್ಲಿ ಮೂರು ಅಡಿ ಎತ್ತರದ ಗಾಂಜಾ ಗಿಡ ಬೆಳೆದು ನಿಂತಿರುವುದು ಕಂಡುಬಂದಿದೆ. ಈ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದರು. ಅಬಕಾರಿ ಇನ್‌ಸ್ಪೆಕ್ಟರ್ ಕೆ.ವಿ. ಶ್ರಾವಣ್ ಹಾಗೂ ತಂಡ ಗಾಂಜಾ ಗಿಡವನ್ನು ಕಸ್ಟಡಿಗೆ ತೆಗೆದುಕೊಂಡಿದೆ. ಈ ಸಂಬಂಧ  ಎನ್‌ಡಿಪಿಎಸ್ ಪ್ರಕರಣವನ್ನು ಅಬಕಾರಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಗಿಡ ನೆಟ್ಟು ಬೆಳೆಸಿರುವುದು ಯಾರೆಂದು ಪತ್ತೆಹಚ್ಚಲು ತನಿಖೆ ಮುಂದುವರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಿವೆಂಟೀವ್ ಆಫೀಸರ್ ಕೆ.ವಿ. ಮನಾಸ್, ಸಿವಿಲ್ ಎಕ್ಸೈಸ್ ಅಫೀಸರ್‌ಗಳಾದ ರಂಜಿತ್ ಟಿ.ಕೆ., ಅಖಿಲೇಶ್ ಎಂ.ಎಂ., ರಾಹುಲ್ ಇ. ಎಂಬಿವರು ಗಾಂಜಾ ಗಿಡ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ ತಂಡದಲ್ಲಿದ್ದರು.

You cannot copy contents of this page