ಕಣ್ಣೂರು: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ಕಾರ್ಮಿಕರಿಗೆ ನಾಗನ ಎರಡು ವಿಗ್ರಹಗಳು ಪತ್ತೆಯಾದ ಘಟನೆ ನಡೆದಿದೆ. ತಾನೂರು ಬಳಿಯ ಉನ್ಯಾಲ್ ಅಳಿಕಲ್ ಸಮುದ್ರದಲ್ಲಿ ವಿಗ್ರಹಗಳು ಪತ್ತೆಯಾಗಿವೆ. ಹಿತ್ತಾಳೆಯಲ್ಲಿ ನಿರ್ಮಿಸಿದ ಈ ವಿಗ್ರಹಗಳು 5 ಕಿಲೋಕ್ಕಿಂತ ಹೆಚ್ಚು ಬಾರವಿದೆ.
ಪುದಿಯಕಡಪ್ಪುರ ಚಕ್ಕಾಚಂಡೆ ಪುರೈಕಲ್ ರಸಾಲ್ ಎಂಬವರು ಸಮುದ್ರದಲ್ಲಿ ಬೀಸಿದ ಬಲೆಯಲ್ಲಿ ಈ ವಿಗ್ರಹಗಳು ಸಿಲುಕಿಕೊಂಡಿವೆ. ಇದನ್ನು ಅವರು ತಾನೂರು ಪೊಲೀಸ್ ಠಾಣೆಗೆ ತಲುಪಿಸಿದ್ದಾರೆ. ಯಾವುದಾದರೂ ಕ್ಷೇತ್ರದಿಂದ ಕಳವಿಗೀಡಾದ ವಿಗ್ರಹಗಳು ಇವಾಗಿರಬಹುದೆಂದೂ ಬಳಿಕ ಕಳ್ಳರು ಇದನ್ನು ಸಮುದ್ರಕ್ಕೆಸೆ ದಿರಬಹುದೆಂದು ಸಂಶಯಿಸ ಲಾಗುತ್ತಿದೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಾಗನ ವಿಗ್ರಹಗಳು ನಾಪತ್ತೆಯಾದ ಬಗ್ಗೆ ದೂರುಗಳಿದ್ದಲ್ಲಿ 9497987167, 9497981332 ಎಂಬೀ ನಂಬ್ರಗಳಲ್ಲಿ ಸಂಪರ್ಕಿಸಬೇಕಾಗಿ ಪೊಲೀಸರು ತಿಳಿಸಿದ್ದಾರೆ.