ಸ್ಥಳೀಯಾಡಳಿತ ಸಂಸ್ಥೆಗಳಿಗೆ ನವೆಂಬರ್ ಯಾ ಡಿಸೆಂಬರ್‌ನೊಳಗೆ ಚುನಾವಣೆ: ಮೀಸಲಾತಿ ವಾರ್ಡ್‌ಗಳ ಆಯ್ಕೆ ಅ.13ರಿಂದ

ತಿರುವನಂತಪುರ: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಈ ವರ್ಷ ನವೆಂಬರ್ ಅಥವಾ ಡಿಸೆಂಬರ್ ತಿಂಗಳೊಳಗಾಗಿ ಚುನಾವಣೆ ನಡೆಸಲಾಗು ವುದೆಂದು ರಾಜ್ಯ ಚುನಾವಣಾ ಆಯುಕ್ತ ಎ. ಶಾಜಹಾನ್ ತಿಳಿಸಿದ್ದಾರೆ.

ಸ್ಥಳೀಯಾಡಳಿತ ಸಂಸ್ಥೆಗಳ ಈಗಿನ ಆಡಳಿತದ ಅವದಿ ಡಿಸೆಂಬರ್ 20 ರಂದು ಕೊನೆಗೊಳ್ಳಲಿದೆ. ಅದರಿಂದಾಗಿ ಅದರ ಮೊದಲು ಚುನಾವಣೆ ನಡೆದು ಹೊಸ ಆಡಳಿತ ಸಮಿತಿಗಳು ಅಧಿಕಾರಕ್ಕೇರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಮೀಸಲಾತಿ ವಾರ್ಡ್‌ಗಳನ್ನು ಡ್ರಾ ಮೂಲಕ ಅಕ್ಟೋಬರ್ 13ರಿಂದ 21ರೊಳಗಾಗಿ ಆರಿಸಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆ ಪ್ರಕ್ರಿಯೆಗಳು ಈಗಾಗಲೇ ಪೂರ್ಣ ಗೊಂಡಿದೆ. ಇದರಿಂದಾಗಿ ವಾರ್ಡ್‌ಗಳ ಸಂಖ್ಯೆಗಳಲ್ಲಿ ಈಗ 1712ರಷ್ಟು ಏರಿಕೆ ಉಂಟಾಗಿದೆ. ಗ್ರಾಮ ಪಂಚಾಯತ್ ಗಳು, ನಗರಸಭೆಗಳು, ಕಾರ್ಪರೇಷನ್ ಗಳು, ಬ್ಲೋಕ್ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್‌ಗಳಲ್ಲಾಗಿ ಈಗ ಒಟ್ಟು 23,612 ವಾರ್ಡ್‌ಗಳಿವೆ. ಮೀಸಲಾತಿ ವಾರ್ಡ್‌ಗಳ ಆಯ್ಕೆಯ ನಂತರ ಸ್ಥಳೀಯಾಡಳಿತ ಸಂಸ್ಥೆಗಳಿಗಿ ರುವ ಚುನಾವಣಾ ಅಧಿಸೂಚನೆ ಯನ್ನು ಹೊರಡಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ಮೀಸಲಾತಿ ವಾರ್ಡ್‌ಗಳ ಆಯ್ಕೆ ಇಂತಿದೆ

ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳ ಮೀಸಲಾತಿ ವಾರ್ಡ್‌ಗಳನ್ನು ಡ್ರಾ ಮೂಲಕ ಆರಿಸುವ ಪ್ರಕ್ರಿಯೆ ಅಕ್ಟೋಬರ್ 13ರಿಂದ ಆರಂಭಗೊಳ್ಳಲಿದೆ. ಇದರಂತೆ 941 ಗ್ರಾಮ ಪಂಚಾಯತ್‌ಗಳ ಮೀಸಲಾತಿ ಆಯ್ಕೆ ಅಕ್ಟೋಬರ್ 13ರಿಂದ 16ರ ತನಕ, 152 ಬ್ಲೋಕ್ ಪಂಚಾಯ ತ್‌ಗಳ ಮೀಸಲಾತಿ ಆಯ್ಕೆ ಅಕ್ಟೋಬರ್ 18 ಮತ್ತು 14 ಜಿಲ್ಲಾ ಪಂಚಾಯತ್‌ಗಳ ಮೀಸಲಾತಿ ವಾರ್ಡ್‌ಗಳ ಆಯ್ಕೆ ಅಕ್ಟೋಬರ್ 21ರಂದು ನಡೆಯಲಿದೆ.

ಇನ್ನು 87 ನಗರಸಭೆಗಳ ಮೀಸಲಾತಿ ವಾರ್ಡ್‌ಗಳ ಆಯ್ಕೆ ಅಕ್ಟೋಬರ್ 16ರಂದು ಕಾರ್ಪೋ ರೇಶನ್‌ಗಳ ಪೈಕಿ ತಿರುವನಂತಪುರ ಮತ್ತು ಕೊಲ್ಲಂ ಕಾರ್ಪೋರೇಶನ್‌ಗಳ ಆಯ್ಕೆ ಅ. 17ರಂದು, ತೃಶರು, ಕೊಚ್ಚಿ ಅ. 18 ಹಾಗೂ ಕಣ್ಣೂರು ಮತ್ತು ಕಲ್ಲಿಕೋಟೆ ಕಾರ್ಪೋರೇಶನ್‌ಗಳ ಮೀಸಲಾತಿ ವಾರ್ಡ್‌ಗಳ ಆಯ್ಕೆ ಅಕ್ಟೋಬರ್ 21ರಂದು ನಡೆಯಲಿದೆ.

You cannot copy contents of this page