ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ಕಚೇರಿ ಅವ್ಯವಸ್ಥೆಯಿಂದ ಕೂಡಿ ರುವುದಾಗಿಯೂ ಮುಂಬದಿ ಕಚೇರಿ ಯಲ್ಲೇ ವಾಹನ ನಿಲುಗಡೆಗೊಳಿಸುತ್ತಿರು ವುದಾಗಿ ಜನತಾ ದಳ ನೇತಾರ ಸಿದ್ದಿಕ್ ಕೈಕಂಬ ಆರೋಪಿಸಿದ್ದಾರೆ. ಮುಂಬದಿ ಕಚೇರಿ ಜ್ಯಾರಿಗೆ ಬಂದಾಗ ಸರಕಾರ ಹೊರಡಿಸಿದ ಎಲ್ಲಾ ನಿರ್ದೇಶ, ವ್ಯವಸ್ಥೆಗಳನ್ನು ಇಲ್ಲಿ ಪಾಲಿಸಿಲ್ಲವೆಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಏರ್ ಕಂಡೀಶನರ್, ಟೋಕನ್ ಮಿಶನ್ ಮೊದಲಾದವುಗಳು ಸ್ತಬ್ಧ ಗೊಂಡಿವೆ. ಅಗತ್ಯ ಕಾರ್ಯಗಳಿಗಾಗಿ ತಲುಪುವ ವಯಸ್ಕರು, ಮಹಿಳೆಯರು, ವಿಕಲ ಚೇತನರು ಮೊದಲಾದವರಿಗೆ ಇಲ್ಲಿ ಸರಿಯಾದ ಆಸನ ವ್ಯವಸ್ಥೆಗಳಿಲ್ಲ. ಆಸನಗಳನ್ನು ಇರಿಸಿರುವ ಸ್ಥಳದಲ್ಲಿ ಉಪಯೋಗಶೂನ್ಯ ವಸ್ತುಗಳನ್ನು ತುಂಬಿಸಿಡಲಾಗಿದೆ. ಉಳಿದ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಪಂಚಾಯತ್ ಕಚೇರಿಗೆ ತಲುಪುವವರಿಗೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗುತ್ತಿ ದೆಯೆಂದು ದೂರಲಾಗಿದೆ. ಸ್ಥಳೀಯಾ ಡಳಿತ ಸಂಸ್ಥೆಯೊಂದು ಈ ಸ್ಥಿತಿಗೆ ತಲುಪಲು ಕಾರಣವೇನೆಂದು ಇಲ್ಲಿಗೆ ತಲುಪಿ ನಿರಾಸೆಗೊಂಡು ಮರಳುತ್ತಿ ರುವ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
