ಕಾಲೇಜು ವಿದ್ಯಾರ್ಥಿನಿ ನಾಪತ್ತೆ: ಕೊಲ್ಲಂಗಾನ ನಿವಾಸಿಯೊಂದಿಗೆ ಹೋಗಿರುವುದಾಗಿ ಸಂಶಯ

ಕಾಸರಗೋಡು:  ಕಾಲೇಜಿಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟ ವಿದ್ಯಾರ್ಥಿನಿ ನಾಪತ್ತೆಯಾಗಿ ರುವುದಾಗಿ ದೂರಲಾಗಿದೆ. ಕಾಞಂಗಾಡ್‌ನ ಕಾಲೇಜೊಂದರ ಪ್ರಥಮ ವರ್ಷ ಸಿವಿಲ್ ಇಂಜಿನಿ ಯರಿಂಗ್ ವಿದ್ಯಾರ್ಥಿನಿಯಾದ ಚೆಮ್ಮಟ್ಟಂವಯಲ್ ನಿವಾಸಿ ಫಾತಿಮತ್ ಶಹಲ (19) ಎಂಬಾಕೆ ನಾಪತ್ತೆಯಾಗಿದ್ದಾಳೆನ್ನಲಾಗಿದೆ.  ಕಳೆದ ಸೋಮವಾರ ಬೆಳಿಗ್ಗೆ 9 ಗಂಟೆ ವೇಳೆ ಈಕೆ ಎಂದಿನಂತೆ ಕಾಲೇಜಿಗೆಂದು ತಿಳಿಸಿ ಮನೆಯಿಂದ ತೆರಳಿದ್ದಳು. ಮರಳಿ ಬಾರದ ಹಿನ್ನೆಲೆಯಲ್ಲಿ ಶೋಧ ನಡೆಸಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.  ಫಾತಿಮತ್ ಶಹಲ ಕಾಸರಗೋಡು ಕೊಲ್ಲಂಗಾನ ನಿವಾಸಿಯಾದ ರಶೀದ್ ಎಂಬಾತನ ಜೊತೆ ಹೋಗಿರುವುದಾಗಿ ಸಂಶಯಿಸಲಾಗುತ್ತದೆಯೆಂದು ತಾಯಿ ರಶೀದ ತಿಳಿಸಿದ್ದಾರೆ. ಪೊಲೀಸರು ಕೇಸುದಾಖಲಿಸಿ ತನಿಖೆ ಆರಂಭಿಸಿದ್ದಾರೆ. 

You cannot copy contents of this page