ಕುಂಬಳೆ: ಶಾಲೆಯಲ್ಲಿ ಕ್ರೀಡಾ ಸ್ಪರ್ಧೆ ನಡೆಯುತ್ತಿದ್ದಂತೆ ವಿದ್ಯಾರ್ಥಿ ಯೋರ್ವ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಕುಕ್ಕಾರ್‌ನಲ್ಲಿರುವ ಮಂಗಲ್ಪಾಡಿ ಜಿಬಿಎಲ್‌ಪಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಹಸನ್ ರಝಾ (10) ಮೃತಪಟ್ಟ ಬಾಲಕನಾಗಿದ್ದಾನೆ. ನಿನ್ನೆ ಅಪರಾಹ್ನ ೩ ಗಂಟೆ ವೇಳೆ ಶಾಲೆಯಲ್ಲಿ ಕ್ರೀಡಾ ಸ್ಪರ್ಧೆ ನಡೆಯುತ್ತಿದ್ದಂತೆ ಈತ ಕುಸಿದು ಬಿದ್ದಿದ್ದನು. ಕೂಡಲೇ ಮಂಗಲ್ಪಾಡಿಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಈತ ಮೂಲತಃ ಉತ್ತರಪ್ರದೇಶದ ಮುರ್ಶಿದಾಬಾದ್ ನಿವಾಸಿಯೂ ಕುಕ್ಕಾರ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಇನ್ಸಾಫ್ ಅಲಿ-ಜಾಸ್ಮಿನ್ ದಂಪತಿ ಪುತ್ರನಾಗಿದ್ದಾನೆ.
ಮೃತನು ತಂದೆ, ತಾಯಿ, ಸಹೋದರಿ ಇಲ್ಮಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ. ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಯಲಿದೆ. ಬಳಿಕ ಮಂಗಲ್ಪಾಡಿ ಶಾಲೆ ಸಮೀಪವಿರುವ ಕ್ವಾರ್ಟರ್ಸ್‌ನಲ್ಲಿ ಸಾರ್ವಜನಿಕ ದಶನಕ್ಕಿರಿಸಲಾಗುವುದು. ಅನಂತರ ಅಯ್ಯೂರು ಪೆರಿಂಗಡಿ ಜುಮಾ ಮಸೀದಿ ಬಳಿ ಅಂತ್ಯಸಂಸ್ಕಾರ ನಡೆಯಲಿರುವುದು. ವಿದ್ಯಾರ್ಥಿಯ ನಿಧನದ ಶೋಕಾರ್ಥವಾಗಿ ಮಂಗಲ್ಪಾಡಿ ಶಾಲೆಗೆ ಇಂದು ರಜೆ ನೀಡಲಾಗಿದೆ.