ಕಾಸರಗೋಡು: ನರಹತ್ಯಾ ಯತ್ನ ಪ್ರಕರಣ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಯುವಕನನ್ನು ಕಾಪಾ ಪ್ರಕರಣದಲ್ಲಿ ಬಂಧಿಸಲಾಗಿದೆ. ಅಜಾನೂರು ತೆಕ್ಕುಂಪುರತ್ತ್‌ನ ಟಿ.ಎಂ.ಸಮೀರ್ ಯಾನೆ ಲಾವಾ ಸಮೀರ್ (42) ಎಂಬಾತನನ್ನು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದ ಸ್ಕ್ವಾಡ್ ಹಾಗೂ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ಸೇರಿ ಸೆರೆಹಿಡಿದಿ ದ್ದಾರೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗುವುದರೊಂದಿಗೆ ಸಮೀರ್ ವಿರುದ್ಧ ಕಾಪಾ ಹೇರಲಾ ಗಿತ್ತು. ಈ ವಿಷಯ ತಿಳಿದು ಸಮೀರ್ ತಲೆಮರೆಸಿಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಬೆಂಗ ಳೂರು, ಮುಂಬೈ ಎಂಬಿಡೆಗಳಲ್ಲೂ ಒಮ್ಮೆ ನೇಪಾಳದಲ್ಲೂ ತಲೆಮರೆಸಿ ಕೊಂಡಿದ್ದನು. ವಾಟ್ಸಪ್ ಕರೆಗಳ ಮೂಲಕ ಮನೆಯವರನ್ನು ಸಂಪರ್ಕಿ ಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದ್ದರಿಂದ ತಲೆಮರೆಸಿಕೊಂಡು ವಾಸಿಸುವ ಸ್ಥಳವನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಸಮೀರ್ ಊರಿಗೆ ತಲುಪಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಸ್ಕೂಟರ್‌ನಲ್ಲಿ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಸಮೀರ್‌ನನ್ನು ಹಿಂಬಾಲಿಸಿದೆ. ಪೆರಿಯಾಕ್ಕೆ ತಲುಪಿ ಪೆಟ್ರೋಲ್ ಬಂಕ್‌ವೊಂದರಿಂದ ಪೆಟ್ರೋಲ್ ತುಂಬಿಸುತ್ತಿದ್ದ ವೇಳೆ ಪೊಲೀಸರು ಅಲ್ಲಿಗೆ ತಲುಪಿದ್ದಾರೆ. ಪೊಲೀಸರನ್ನು ಕಂಡ ತಕ್ಷಣ ಸಮೀರ್ ಅಪರಿಮಿತ ವೇಗದಲ್ಲಿ ಸ್ಕೂಟರ್ ಓಡಿಸಿ ಪರಾರಿಯಾಗಿದ್ದನು. ಆದ್ದರಿಂದ ಅತೀ ಗುಪ್ತವಾಗಿ ಆತನನ್ನು ಹಿಂಬಾಲಿಸಿದ ಪೊಲೀಸರು ರಾತ್ರಿವೇಳೆ ಪಳ್ಳಿಕ್ಕೆರೆ ಪೂಚಕ್ಕಾಡ್‌ನಿಂದ ಸೆರೆಹಿಡಿದಿದ್ದಾರೆ.
