ಕೋಟೂರು: ನಿವೃತ್ತ ಮುಖ್ಯ ಶಿಕ್ಷಕ, ಹಿರಿಯ ಯಕ್ಷಗಾನ ಕಲಾವಿದ, ಮಲೆಯಾಳ ಯಕ್ಷಗಾನದ ಪಿತಾ ಮಹರಾದ ಕೋಟೂರು ಬಳಿಯ ಅಡ್ಕ ಗೋಪಾಲಕೃಷ್ಣ ಭಟ್ (92) ಅವರನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಭೇಟಿಯಾಗಿ ಸ್ವಾಸ್ತ್ಯ ವಿಚಾರಿಸಿ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಗೋಪಾಲಕೃಷ್ಣ ಭಟ್ ಅವರು ಸ್ವಾಮೀಜಿಯವರಲ್ಲಿ ತಮ್ಮ ಕಲಾಜೀವನದ ಅನುಭವಗಳನ್ನು ವಿವರಿಸಿ ಸ್ವಾಮೀಜಿ ಯವರ ಆಗಮನಕ್ಕೆ ಸಂತೋಷ ವ್ಯಕ್ತಪಡಿಸಿದರು.
