ನಮ್ಮದು ಸಮಾನ ಅಂತರ ನಿಲುವು ಆದರೂ ಶಬರಿಮಲೆ ವಿಷಯದಲ್ಲಿ ನಾವು ಸರಕಾರದ ಜೊತೆ-ಎನ್‌ಎಸ್‌ಎಸ್: ಯುಡಿಎಫ್, ಬಿಜೆಪಿಗೆ ಶಾಕ್

ಚೆಂಗನಾಶ್ಶೇರಿ: ನಮ್ಮದು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಸಮಾನ ಅಂತರ ಕಾಯ್ದುಕೊಳ್ಳುವ ನಿಲುವು ಆಗಿದ್ದರೂ, ಶಬರಿಮಲೆ ವಿಷಯದಲ್ಲಿ ನಾವು ರಾಜ್ಯ ಸರಕಾರದ ಜತೆಗಿದ್ದೇವೆಂದು ಎನ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಜಿ. ಸುಕುಮಾರನ್ ನಾಯರ್ ಹೇಳಿದ್ದಾರೆ.

ಸಮಾನ ಅಂತರ ನಿಲುವಿನಲ್ಲಿ ನಾವು ಇನ್ನೂ ಅಚಲವಾಗಿಯೇ ಉಳಿದುಕೊಂಡಿದ್ದೇವೆ. ಶಬರಿಮಲೆಯ ಆಚಾರ ಮತ್ತು ನಂಬುಗೆಯನ್ನು ಸಂರಕ್ಷಿಸಲಾಗುವುದೆಂದು ರಾಜ್ಯ ಸರಕಾರ ನಮಗೆ ಭರವಸೆ ನೀಡಿದೆ. ಆ ಭರವಸೆಯನ್ನು ಸರಕಾರ ಕಾಯ್ದುಕೊಳ್ಳ ಲಿದೆಯೆಂಬ ನಂಬುಗೆನಯನ್ನು ನಾವು ಹೊಂದಿದ್ದೇವೆ. ಶಬರಿಮಲೆ ವಿಷಯದಲ್ಲಿ ಕಾಂಗ್ರೆಸ್  ಕಳ್ಳಾಟವಾಡುತ್ತಿದೆ. ಅದು ಜನರಿಗೆ ಮನದಟ್ಟಾಗಿದೆ. ಶಬರಿಮಲೆಗೆ ಯುವತಿಯರ ಪ್ರವೇಶದ ವಿರುದ್ಧ ಈ ಹಿಂದೆ ನಡೆದ ಹೋರಾಟಕ್ಕೆ ಸಂಬಂಧಿಸಿ ದಾಖಲಿಸಿಕೊಳ್ಳಲಾಗಿರುವ ಕೇಸುಗಳನ್ನೆಲ್ಲಾ ಹಿಂತೆಗೆದುಕೊಳ್ಳಬೇ ಕೆಂದು ನಾವು ಸರಕಾರದೊಡನೆ ಈ ಹಿಂದೆಯೇ ಆಗ್ರಹಪಟ್ಟಿದ್ದೇವೆ. ಅದನ್ನು ಸರಕಾರ ಪರಿಗಣಿಸುವ ನಂಬುಗೆಯನ್ನು ನಾವು ಹೊಂದಿದ್ದೇವೆ. ಶಬರಿಮಲೆಯ ಆಚಾರ ಮತ್ತು ನಂಬುಗೆಯನ್ನು ಸಂರಕ್ಷಿಸಲು ಕೇಂದ್ರ ಸರಕಾರವೂ ಏನೂ ಮಾಡಿಲ್ಲವೆಂದು ಸುಕುಮಾರನ್ ನಾಯರ್ ಹೇಳಿದ್ದಾರೆ.

ಸುಕುಮಾರನ್ ನಾಯರ್‌ರ ಈ ಹೇಳಿಕೆ ಎಡರಂಗಕ್ಕೆ ಸಂತೃಪ್ತಿ ನೀಡಿದರೂ, ಇನ್ನೊಂದೆಡೆ ಅದು ಯುಡಿಎಫ್ ಮತ್ತು ಬಿಜೆಪಿಗೆ ಶಾಕ್ ನೀಡುವಂತೆ ಮಾಡಿದೆ.

ಶಬರಿಮಲೆ ವಿಷಯದಲ್ಲಿ ರಾಜ್ಯ ಸರಕಾರದ ನಿಲುವಿಗೆ ಎಸ್‌ಎನ್‌ಡಿಪಿ ಈಗಾಗಲೇ ಬೆಂಬಲ ನೀಡಿದೆ. ಅದರ ಬೆನ್ನಲ್ಲೇ ಎನ್‌ಎಸ್‌ಎಸ್ ಕೂಡಾ ಈ ವಿಷಯದಲ್ಲಿ  ಸರಕಾರದ ಜತೆ ನಿಂತಿದ್ದು, ಇದ ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ವಿಧಾನಸಭಾ ಚುನಾವಣೆಯಲ್ಲಿ ಎಡರಂಗಕ್ಕೆ ಇನ್ನಷ್ಟು ಹೆಚ್ಚು ಆತ್ಮವಿಶ್ವಾಸ ನೀಡುವಂತೆ ಮಾಡಿದೆ.

You cannot copy contents of this page