ಕಾಸರಗೋಡು: ರಾಜ್ಯದಲ್ಲಿ ಅಲ್ಪ ವಿರಾಮದ ಬಳಿಕ ಮತ್ತೆ ಮಳೆ ತೀವ್ರ ಗೊಳ್ಳಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂದಿನ ಐದು ದಿನ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಹಾಗೂ ಇಂದು, ನಾಳೆ, ಶನಿವಾರಗ ಳಂದು ಕೆಲವು ಕಡೆ ತೀವ್ರ ಮಳೆಗೆ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ತೀವ್ರ ಮಳೆಯನ್ನು ಗಣನೆಗೆ ತೆಗೆದು ಕೇಂದ್ರ ಹವಾಮಾನ ಇಲಾಖೆ ವಿವಿಧ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಿದೆ.
ಇಂದು ಆಲಪ್ಪುಳ, ಕೋಟಯಂ, ಇಡುಕ್ಕಿ, ಎರ್ನಾಕುಳಂ, ತೃಶೂರ್ ಜಿಲ್ಲೆಗಳಲ್ಲಿ ಹಾಗೂ ನಾಳೆ ಪತ್ತನಂತಿಟ್ಟ, ಆಲಪ್ಪುಳ, ಕೋಟಯಂ, ಇಡುಕ್ಕಿ, ಎರ್ನಾಕುಳಂ, ತೃಶೂರು ಜಿಲ್ಲೆಗಳಲ್ಲೂ, ಶನಿವಾರ ಮಲಪ್ಪುರಂ, ಕಲ್ಲಿಕೋಟೆ, ವಯನಾಡ್, ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಪಶ್ಚಿಮಬಂಗಾಳ, ಉತ್ತರ ಒಡಿಶ್ಶಾ, ಉತ್ತರ ಪಶ್ಚಿಮ ಬಂಗಾಳ ಆಳಸಮುದ್ರದ ಮೇಲೆ ರೂಪುಗೊಂಡ ವಾಯುಭಾರ ಮಳೆಗೆ ಸಾಧ್ಯತೆ ಸೃಷ್ಟಿಸಿದೆ ಎನ್ನಲಾಗಿದೆ. ಮುಂದಿನ ೨೪ ಗಂಟೆಗಳೊಳಗೆ ಇದು ದುರ್ಬಲಗೊಳ್ಳಲು ಸಾಧ್ಯತೆಯೂ ಇದೆ ಎನ್ನಲಾಗಿದೆ.