ಕಾಸರಗೋಡು: ಒಂಭತ್ತು ಮತ್ತು ಆರು ವರ್ಷದ ಬಾಲಕಿ ಯರ ಮುಂದೆ ಲೈಂಗಿಕ ಚೇಷ್ಠೆ ತೋರಿದ ಪ್ರಕರಣದ ಆರೋಪಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ಪೋಕ್ಸೋ ನ್ಯಾಯಾಲಯ ಒಂದು ವರ್ಷ ಸಜೆ ಮತ್ತು ಮೂರು ತಿಂಗಳ ಸಜೆ ಹಾಗೂ 10,500 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.ಚಿತ್ತಾರಿಕ್ಕಲ್ ಪಾರಕಡವಿನ ಕುದಿರುಮ್ಮಲ್ ಹೌಸ್ನ ಸಂದೀಪ್ (40) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಆರು ತಿಂಗಳು ಮತ್ತು ಒಂದು ವಾರ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಲೈಂಗಿಕ ಚೇಷ್ಠೆ ತೋರಿದ ಆರೋಪದಂತೆ ಚಿತ್ತಾರಿಕ್ಕಲ್ ಪೊಲೀಸರು ಆರೋಪಿಯ ವಿರುದ್ಧ ಕೇಸು ದಾಖಲಿ ಸಿಕೊಂಡಿದ್ದರು.
