ಪೆರ್ಲ: ಎಣ್ಮಕಜೆ ಪಂ.ನ ವಾರ್ಷಿಕ ಯೋಜನೆಯಂತೆ ಪೆರ್ಲ ಶ್ರೀ ಸತ್ಯನಾರಾಯಣ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ ಶೌಚಗೃಹದ ಉದ್ಘಾಟನೆಯನ್ನು ಪಂ. ಅಧ್ಯಕ್ಷ ಸೋಮಶೇಖರ ಜೆ.ಎಸ್. ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ನಾಡಿನ ಪ್ರಗತಿಗೆ ಸಹಾಯಕವಾಗಿದ್ದು, ‘ಶಾಲೆ ಸಮಾಜದ ಎಲ್ಲರನ್ನು ಒಂದಾಗಿಸುವ ಪವಿತ್ರ ಆಲಯವಾಗಿದೆ. ಶೈಕ್ಷಣಿಕ ಸಂಸ್ಥೆಗಳು ಸಮಾಜದ ಮುಖ್ಯ ಭೂಮಿಕೆಯಾಗಿದ್ದು, ಅವುಗಳ ಅಭಿವೃದ್ಧಿ ನಮ್ಮೆಲ್ಲರ ಕರ್ತವ್ಯವಾಗಬೇಕು.
ಪಂಚಾಯತ್‌ಗೆ ಒಳಪಟ್ಟ ಶಿಕ್ಷಣ ಸಂಸ್ಥೆಗಳ ಮೂಲಭೂತ ಸೌಕರ್ಯಗಳನ್ನು ಪೂರೈಸುವಲ್ಲಿ ನಾವು ಕೆಲಸವನ್ನು ಮಾಡಿದ್ದೇವೆ ಎಂಬ ಸಾರ್ಥಕತೆಯ ಮನೋಭಾವವಿದೆ. ಸರಕಾರದ ಯೋಜನೆಗಳು ಫಲಪ್ರದವಾಗಿ ಜನಸಾಮಾನ್ಯರೆಡೆಗೆ ತಲುಪಿದಾಗಲೇ ಅಭಿವೃದ್ಧಿಯ ಶಕೆ ಆರಂಭವಾಗುತ್ತದೆ ಎಂದು ತಿಳಿಸಿದರು. ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗಾಂಭೀರ್ ಶುಭಾಶಂಸನೆ ಗೈದರು. ಪೆರ್ಲ ಶ್ರೀಸತ್ಯನಾರಾಯಣ ವಿದ್ಯಾಸಂಸ್ಥೆಗಳ ಉಪಾಧ್ಯಕ್ಷ ವೆಂಕಟ್ರಾಜ ಮಿತ್ರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ, ಪಿಟಿಎ ಅಧ್ಯಕ್ಷ ರಾಜೇಶ್ ಬಜಕೂಡ್ಲು, ಎಂಪಿಟಿಎ ಅಧ್ಯಕ್ಷೆ ಬಿಂದು ಬಣ್ಪುತ್ತಡ್ಕ, ಪಿಟಿಎ ಉಪಾಧ್ಯಕ್ಷ ರವೀಶ್ಚಂದ್ರ ಸೂರ್ಡೆಲು, ಶಿಕ್ಷಕಿಯರಾದ ಉಮಾ ಶಂಕರಿ, ಸುರಕ್ಷಾ, ಅಮೃತಾ, ರೇಷ್ಮಾ, ಶಾಂತಾ, ಶಶಿಕಲಾ, ಸುಮಾ, ವಿನೋದಾ ಉಪಸ್ಥಿತರಿದ್ದರು. ಮುಖ್ಯೋ ಪಾಧ್ಯಾಯಿನಿ ಸಂಧ್ಯಾ ಎನ್ ಸ್ವಾಗತಿ ಸಿದರು. ಶಿಕ್ಷಕ ಶ್ಯಾಮ್ ರಂಜಿತ್ ನಿರೂ ಪಿಸಿದರು. ಸ್ಟಾಫ್ ಕಾರ್ಯದರ್ಶಿ ಉದಯ ಸಾರಂಗ್ ವಂದಿಸಿದರು.