ಮಾನ್ಯ: ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಬೆಳ್ಳಿ ಅಭಿಯಾನದ ಉದ್ಘಾಟನಾ ಸಮಾರಂಭ ಸೆ. 29ರಂದು ಬೆಳಿಗ್ಗೆ 10 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಮಾನ್ಯಶ್ರೀ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ಪ್ರಥಮ ಬೆಳ್ಳಿ ಸಮರ್ಪಣೆ ಮಾಡಿ ಉದ್ಘಾಟಿಸುವರು. ಕೊಲ್ಯ ಶ್ರೀದೇವಿ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮೊಕ್ತೇಸರ ಮಧುಸೂದನ ಅಯ್ಯರ್ ಮುಖ್ಯ ಅತಿಥಿಯಾಗಿರುವರು. ಭಜನಾ ಮಂದಿರದ ಪ್ರತಿಷ್ಠಾ ಗುರುಸ್ವಾಮಿ ಶಂಕರ ದೇವಾಂಗ ಸಹಿತ ಹಲವರು ಗಣ್ಯರು ಉಪಸ್ಥಿತರಿರುವರು. ಶ್ರೀ ಅಯ್ಯಪ್ಪ ಸ್ವಾಮಿಯ ವಿಗ್ರಹಕ್ಕೆ ಬೇಕಾದ ಬೆಳ್ಳಿಯನ್ನು ಬೆಳ್ಳಿ ಅಭಿಯಾನದ ಮೂಲಕ ಸಂಗ್ರಹಿಸುವ ಗುರಿಯಿರಿಸಿ ಕೊಂಡಿದ್ದು, ಆದ್ದರಿಂದ ಭಕ್ತರು ಬೆಳ್ಳಿ ಅಥವಾ ನಗದು ಸಮರ್ಪಿಸಿ ಸಹಕರಿಸಬೇಕೆಂದು ಮಾನ್ಯ ಶ್ರೀ ಅಯ್ಯಪ್ಪ ಸೇವಾ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
