ಬದಿಯಡ್ಕ: ಮಾಜಿ ಶಾಸಕ, ಮಾಜಿ ಕೆಪಿಸಿಸಿ ಕಾರ್ಯದರ್ಶಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರೂ ಆಗಿದ್ದ ಕೆ.ಪಿ. ಕುಂಞಿಕಣ್ಣನ್ ಅವರ ಪ್ರಥಮ ಸಂಸ್ಮರಣಾ ವಾರ್ಷಿಕ ದಿನ ಕಾರ್ಯಕ್ರಮವನ್ನು ಇಂದು ಬದಿಯಡ್ಕ ಈಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆಸಲಾಯಿತು. ಕಾಂಗ್ರೆಸ್ ಬದಿಯಡ್ಕ ಮಂಡಲ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಕರ್ಷಕ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ತಿರುಪತಿ ಕುಮಾರ್ ಭಟ್ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ನೇತಾರರಾದ ಗಂಗಾಧರ ಗೋಳಿಯಡ್ಕ, ರಾಮ ಪಟ್ಟಾಜೆ, ಶಾಫಿ ಗೋಳಿಯಡ್ಕ, ಚಂದ್ರಹಾಸನ್ ಮಾಸ್ತರ್, ಜಗನ್ನಾಥ ರೈ, ಶ್ರೀನಾಥ್ ಬದಿಯಡ್ಕ, ಲೋಹಿತಾಕ್ಷನ್, ಸತೀಶನ್ ಸಿರಿಯಾಕ್, ರವೀಂದ್ರ ಕುಂಟಾಲುಮೂಲೆ,ಸಿರಿಲ್ ಡಿ’ಸೋಜಾ, ಖಮರುದ್ದೀನ್, ವಿನ್ಸೆಂಟ್ ಕ್ರಾಸ್ತ, ಮಹಮ್ಮದ್ ಕುಂಞಿ ಗೋಳಿಯಡ್ಕ, ರಾಮ ಗೋಳಿಯಡ್ಕ ಉಪಸ್ಥಿತರಿದ್ದರು.
