ತಿರುವನಂತಪುರ: ರಾಜ್ಯದ ಸಾರ್ವತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಟ್ಟ ಎಲ್ಲಾ ಶಾಲಾ ಅಧ್ಯಾಪಕರಿಗೂ ಗೌಪ್ಯ ವರದಿ ಏರ್ಪಡಿಸುವ ವಿಷಯ ಸರಕಾರದ ಪರಿಗಣನೆಯಲ್ಲಿದೆಯೆಂದು ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ತಿಳಿಸಿದ್ದಾರ.
ಶಾಲೆಯಲ್ಲಿ ಪ್ರಾಂಶುಪಾಲರಿಗೆ ಮಾತ್ರವೇ ಅವರ ಸೇವನಾಗುಣಮಟ್ಟ ಹಾಗೂ ಅವರ ವೈಫಲ್ಯಗಳ ಕುರಿತಾದ ಮಾಹಿತಿಗಳನ್ನು ಉನ್ನತಾಧಿಕಾರಿಗಳಿಗೆ ಕಾನ್ಫಡೆನ್ಶಿ ಯಲ್(ಗೌಪ್ಯ) ರಿಪೋರ್ಟ್ ಸಲ್ಲಿಸಲಾಗುತ್ತಿದೆ. ಇಂತಹ ಕ್ರಮವನ್ನು ಇನ್ನು ಶಾಲಾ ಅಧ್ಯಾಪಕರಿ ಗೂ ಅನ್ವಯಗೊಳಿಸುವ ವಿಷಯ ಸರಕಾರದ ಪರಿಶೀಲನೆಯಲ್ಲಿದೆ.
ಅಧ್ಯಾಪಕರಿಗಾಗಿರುವ ತರಬೇತಿ ಗಳು, ಮೌಲ್ಯ ನಿರ್ಣಯ ಇತ್ಯಾದಿ ಗಳಲ್ಲಿ ಉದ್ದೇಶಪೂರ್ವಕವಾಗಿ ಭಾಗವಹಿಸದೇ ಇರುವಿಕೆ, ಶಾಲೆಗಳಿಗೆ ವಿಳಂಬವಾಗಿ ಆಗಮಿಸುವಿಕೆ ಇತ್ಯಾದಿ ಗಳನ್ನು ಕಾನ್ಫಡೆನ್ಶಿಯಲ್ ರಿಪೋ ರ್ಟ್‌ನಲ್ಲಿ ಪರಿಗಣಿಸಲಾಗುವುದೆಂದು ಸಚಿವರು ತಿಳಿಸಿದ್ದಾರೆ. ಅಧ್ಯಾಪಕರ ಸಂಘಟನೆಗಳೊಂದಿಗೆ ಮೊದಲು ಸಮಾಲೋಚನೆ ನಡೆಸಿದ ಬಳಿಕವಷ್ಟೇ ಈ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದೆಂದು ಸಚಿವರು ತಿಳಿಸಿದ್ದಾರೆ.