ಕಾಸರಗೋಡು: ದೇಶದ ಮುಂಚೂಣಿ ಆರೋಗ್ಯ ಸೇವಾದಾತರಾದ ಆಸ್ಟರ್ ಡಿ.ಎಂ. ಹೆಲ್ತ್ ಕೇರ್, ಕೇರಳದಲ್ಲಿ ಅದರ 8ನೇ ಆಸ್ಪತ್ರೆಯಾದ ಆಸ್ಟರ್ ಮಿಮ್ಸ್ ಕಾಸರಗೋಡು ಇದರ ಚಟುವಟಿಕೆ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ವಿಶ್ವೋತ್ತರ ದರ್ಜೆಯ ಆರೋಗ್ಯ ಪರಿಪಾಲನೆ, ರಾಜ್ಯದಲ್ಲಿ ಇನ್ನಷ್ಟು ಕಡೆಗಳಿಗೆ ತಲುಪಿಸುವುದು ಎಂಬ ಆಸ್ಟರ್‌ನ ಉದ್ದೇಶಕ್ಕೆ ಬಲ ನೀಡಲಿದೆ ಹೊಸ ಆಸ್ಪತ್ರೆ. ಅಕ್ಟೋಬರ್ 2ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಸ್ಪತ್ರೆಯನ್ನು ಉದ್ಘಾಟಿಸುವರು. ಕರ್ನಾಟಕ ಆರೋಗ್ಯ ಕುಟುಂಬ ಕ್ಷೇಮ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.
2.1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿರುವ 264 ಹಾಸಿಗೆಗಳಿರುವ ಈ ಆಸ್ಪತ್ರೆ ಉತ್ತರ ಕೇರಳದ ಆರೋಗ್ಯ ವಲಯಕ್ಕೆ ಹೊಸ ಹುರುಪು ನೀಡಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಅತ್ಯಂತ ಉತ್ತಮ, ರೋಗಿ ಕೇಂದ್ರೀಕೃತ ಹಾಗೂ ಅತ್ಯಾಧುನಿಕ ಆರೈಕೆ ಎಲ್ಲರಿಗೂ ಲಭ್ಯವಾಗುವ ರೀತಿಯಲ್ಲಿ ಈ ಆಸ್ಪತ್ರೆಗೆ ರೂಪು ನೀಡಲಾಗಿದೆ.
ಆಸ್ಟರ್ ಡಿಎಂ ಹೆಲ್ತ್‌ಕೇರ್ ಸ್ಥಾಪಕ ಅಧ್ಯಕ್ಷ ಡಾ. ಆಜಾದ್ ಮೂಪನ್, ಡೈರೆಕ್ಟರ್ ಅನೂಪ್ ಮೂಪನ್, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎಕೆಎಂ ಅಶ್ರಫ್, ಇ. ಚಂದ್ರಶೇಖರನ್, ಎನ್.ಎ. ನೆಲ್ಲಿಕುನ್ನು, ಸಿ.ಎಚ್. ಕುಂಞಂಬು, ಎಂ. ರಾಜಗೋಪಾಲ್ ಸಹಿತ ಹಲವು ಗಣ್ಯರು ಭಾಗವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಚೆಂಗಳ ಪಂ. ಅಧ್ಯಕ್ಷ ಖಾದರ್ ಬದ್ರಿಯ, ಆಸ್ಟರ್ ಕೇರಳ ಕ್ಲಸ್ಟರ್ ಸಿ.ಎಂ.ಎಸ್. ಡಾ. ಸೂರಜ್ ಕೆ.ಎಂ, ಆಸ್ಟರ್ ಮಿಮ್ಸ್ ಕಾಸರಗೋಡು ಸಿ.ಒ.ಒ ಡಾ| ಅನೂಪ್ ನಂಬ್ಯಾರ್, ಆಸ್ಟರ್ ಡಿ.ಎಂ. ಹೆಲ್ತ್‌ಕೇರ್‌ನ ಇತರ ಗಣ್ಯರು ಉದ್ಘಾಟನೆ ಸಂದರ್ಭದಲ್ಲಿ ಉಪಸ್ಥಿತರಿರುವರು.