ಬೆಂಗಳೂರು: ಪತ್ನಿ ಮೇಲಿನ ಕೋಪದಿಂದ ವ್ಯಕ್ತಿಯೋರ್ವ ತನ್ನ ಮೂವರು ಮಕ್ಕಳ ಮೇಲೆ ಕೊಡಲಿಯಿಂದ ಕಡಿದಿದ್ದು, ಈಪೈಕಿ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವಿಗೀಡಾಗಿ ಓರ್ವ ಪುತ್ರ ಗಂಭೀರಗಾಯಗೊಂಡ ಭೀಬತ್ಸ ಘಟನೆ ಯಾದಗಿರಿ ಸಮೀಪದ ಹತ್ತಿಕುಣಿ ಗ್ರಾಮದಲ್ಲಿ ನಡೆದಿದೆ. ಹತ್ತಿಕುಣಿ ನಿವಾಸಿ ಶರಣಪ್ಪ ದುಗನೂರ ಎಂಬಾತ ಈ ಕೃತ್ಯವೆಗಿದ್ದಾನೆಂದು ಹೇಳಲಾಗುತ್ತಿದೆ. ನಾಲ್ಕು ವರ್ಷ ಪ್ರಾಯದ ಸ್ಟಾನಿ, ಮೂರು ವರ್ಷದ ಭಾರ್ಗವ ಎಂಬಿಬ್ಬರು ಮಕ್ಕಳು ಕೊಲೆಗೀಡಾಗಿದ್ದಾರೆ. ಎಂಟು ವರ್ಷದ ಹೇಮಂತ ಗಂಭೀರ ಗಾಯಗೊಂಡಿದ್ದು, ಈತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಬೆಳಿಗ್ಗೆ ಶರಣಪ್ಪನ ಹೆಂಡತಿ ಹೊರಗೆ ತೆರಳಿದ್ದ ಸಂದರ್ಭದಲ್ಲಿ ಶರಣಪ್ಪ ಮಕ್ಕಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದನು. ವಿಷಯ ತಿಳಿದು ಸ್ಥಳಕ್ಕೆ ತಲುಪಿದ ಪೊಲೀಸರು ನಡೆಸಿದ ಶೋಧ ವೇಳೆ ಆರೋಪಿಯನ್ನು ಬಂಧಿಸಲಾಗಿದೆ.
