ಕಳವು ಪ್ರಕರಣಗಳಲ್ಲಿ ಆರೋಪಿಯಾದ ಮಂಜೇಶ್ವರ ನಿವಾಸಿ 10 ವರ್ಷ ಬಳಿಕ ಸೆರೆ

ಮಂಜೇಶ್ವರ: ಎರಡು ಕಳವು ಪ್ರಕರಣಗಳಲ್ಲಿ ಆರೋಪಿಯಾದ ಮಂಜೇಶ್ವರ ನಿವಾಸಿ 10 ವರ್ಷದ ಬಳಿಕ ಸೆರೆಗೀಡಾಗಿದ್ದಾನೆ. ಮಂಜೇಶ್ವರ ಕುಳೂರಿನ ಅಶ್ರಫ್ (32) ಎಂಬಾತ ನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. 2015 ಆಗಸ್ಟ್ 7ರಂದು ವಿಟ್ಲ ಪೇಟೆಯ ಜಗದೀಶ್ ಕಾಮತ್‌ರ ಮೇಲೆ ಮೆಣಸಿನ ಪುಡಿ ಎರಚಿ ಕಳವು ನಡೆಸಿದ ಪ್ರಕರಣದಲ್ಲಿ ಅಶ್ರಫ್ ಆರೋಪಿಯಾಗಿ ದ್ದಾನೆ. 2016 ಜನವರಿ 23ರಂದು ಕೊಲ್ನಾಡು ಗ್ರಾಮದ ವೈನ್ ಶಾಪ್ ಒಂದಕ್ಕೆ ನುಗ್ಗಿ ಹಣ ಕಳವುಗೈದ ಪ್ರಕರಣ ವನ್ನೂ ಈತನ ಮೇಲೆ ದಾಖಲಿಸ ಲಾಗಿದೆ. ಎರಡು ಪ್ರಕರಣಗಳಲ್ಲೂ ಈತ ನ್ಯಾಯಾಲಯದಲ್ಲಿ ಹಾಜರಾಗದುದರಿಂದ ಈತನ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು.

You cannot copy contents of this page