ಆಲಪ್ಪುಳ: ಗೇಟ್ ತಲೆಗೆ ಬಿದ್ದು ಒಂದೂವರೆ ವರ್ಷದ ಮಗುವೊಂದು ಮೃತಪಟ್ಟ ಘಟನೆ ಆಲಪ್ಪುಳದಿಂದ ವರದಿಯಾಗಿದೆ. ವೈಕಂ ಟಿವಿಪುರಂ ಮಣಿಮಂದಿರ ನಿವಾಸಿ ಅಶಿಲ್ ಮಣಿಯಾನ್-ಅಶ್ವತಿ ದಂಪತಿಯ ಪುತ್ರ ಋದವ್ ಮೃತಪಟ್ಟ ಮಗುವಾಗಿದೆ. ಕಳೆದ ಸೋಮವಾರ ಆಲಪ್ಪುಳ ಪಳವೀಡ್ ಎಂಬಲ್ಲಿರುವ ಅಶ್ವತಿಯ ಮನೆಯಲ್ಲಿ ದುರ್ಘಟನೆ ಸಂಭವಿಸಿತ್ತು. ಗೇಟ್ ಮುಚ್ಚುತ್ತಿದ್ದಂತೆ ಅದು ಮಗುವಿನ ತಲೆಗೆ ಬಿದ್ದಿತ್ತು. ಇದರಿಂದ ಗಂಭೀರ ಗಾಯಗೊಂಡ ಮಗುವನ್ನು ವಂಡಾನಂ ಮೆಡಿಕಲ್ ಕಾಲೇಜು ಆಸತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ.
