ಕಾಸರಗೋಡು: ಜಿಲ್ಲೆಯ ಚಿಟ್ಟಾರಿಕ್ಕಲ್, ಮಂಜೇಶ್ವರ, ಬೇಡಗಂ ಪೊಲೀಸ್ ಠಾಣೆಗಳಲ್ಲಿ ನಾಲ್ಕು ಪೋಕ್ಸೋ ಕೇಸುಗಳನ್ನು ದಾಖಲಿಸಲಾಗಿದೆ. ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಚಿಟ್ಟಾರಿಕ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಾಯಪೂರ್ತಿಯಾಗದ ಇಬ್ಬರು ಬಾಲಕರಿಗೆ ಸಲಿಂಗರತಿ ಕಿರುಕುಳ ನೀಡಿದ ಆರೋಪದಂತೆ ಎರಡು ಕೇಸುಗಳನ್ನು ದಾಖಲಿಸಲಾಗಿದೆ. ಈ ಎರಡು ಪ್ರಕರಣಗಳಲ್ಲೂ ಆರೋಪಿಯಾದ ಕಣ್ಣನ್ (42) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ೧೨ ವರ್ಷ ಪ್ರಾಯದ ಬಾಲಕನಿಗೆ 2021ರಲ್ಲಿ ಹಾಗೂ ಸ್ನೇಹಿತನಾದ ಇನ್ನೋರ್ವ ಬಾಲಕನಿಗೆ 2024ರ ಕ್ರಿಸ್ಮಸ್ ದಿನದಂದು ಕಿರುಕುಳ ನೀಡಿರುವುದಾಗಿ ಪ್ರಕರಣದಲ್ಲಿ ತಿಳಿಸಲಾಗಿದೆ.
ಉಪ್ಪಳದಲ್ಲಿ 15 ವರ್ಷಪ್ರಾಯದ ಬಾಲಕಿಯರ ಮುಂದೆ ಬಟ್ಟೆ ಎತ್ತಿ ತೋರಿಸಿದನೆಂಬ ಆರೋಪದಂತೆ ಅಬೂಬಕ್ಕರ್ (68) ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತ ಪೊಲೀಸರ ವಶದಲ್ಲಿದ್ದಾನೆ. 14ರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಆರೋಪದಂತೆ 17ರ ಹರೆಯದ ಬಾಲಕನ ವಿರುದ್ಧ ಬೇಡಗಂ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂ ಡಿದ್ದಾರೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ.