ಕಾಸರಗೋಡು: ರಾಜ್ಯದಲ್ಲಿ ಎಲ್ಲಾ ವಾಹನಗಳಿಗೂ ಅತೀವ ಸುರಕ್ಷತಾ ನಂಬ್ರ ಪ್ಲೇಟ್ ಅಳವಡಿಕೆಯನ್ನು ರಾಜ್ಯ ಸರಕಾರ ಕಡ್ಡಾಯಗೊಳಿಸಿದೆ. ಮಾತ್ರವಲ್ಲ ಈ ಬಗ್ಗೆ ಅಧಿಕೃತ ಅಧಿಸೂಚನೆಯನ್ನೂ ಜ್ಯಾರಿಗೊಳಿಸಿದೆ. ಹೀಗೆ ಅಳವಡಿಸಲಾಗುವ ಅತೀವ ಸುರಕ್ಷಣಾ ನಂಬ್ರ ಪ್ಲೇಟ್‌ಗಳಿಗೆ ಶುಲ್ಕವನ್ನೂ ನಿಗದಿಪಡಿಸಲಾಗಿದೆ.
ಇದರಂತೆ ನಿಗದಿಪಡಿಸಲಾದ ಶುಲ್ಕ ಇಂತಿದೆ. ದ್ವಿಚಕ್ರವಾಹನಗಳು- 500ರೂ, ತ್ರಿಚಕ್ರ ವಾಹನಗಳು-೬೦೦ರೂ, ಫೋರ್ ವೀಲರ್-1000ರೂ., ಮೀಡಿಯಂ/ ಹೆವಿ ವಾಹನಗಳು- 1000 ರೂ, ಟ್ರಾಕ್ಟರ್ ಮತ್ತು ಕೃಷಿ ಅಗತ್ಯದ ವಾಹನಗಳ ಶುಲ್ಕವನ್ನು 1000 ರೂ.ಆಗಿ ನಿಗದಿ ಪಡಿಸಲಾಗಿದೆ. ಹೀಗೆ ಅಂಗೀಕರಿಸಲಾದ ದರದಲ್ಲಿ ಇಂತಹ ನಂಬ್ರ ಪ್ಲೇಟ್‌ಗಳನ್ನು ತಯಾರಿಸಿ ಅವುಗಳನ್ನು ವಾಹನಗಳಿಗೆ ಅಳವಡಿಸಲು 18 ಅಂಗೀಕೃತ ಸಂಸ್ಥೆಗಳಿಂದ ಟೆಂಡರ್‌ಗಳನ್ನು ಆಹ್ವಾನಿಸಲು ಸರಕಾರ ಸಾರಿಗೆ ಇಲಾಖೆಗೆ ಸರಕಾರ ಅನುಮತಿ ನೀಡಿದೆ. ಇಂತಹ ಕ್ರಮದಿಂದ ಸರಕಾರಕ್ಕೂ ಆರ್ಥಿಕ ಆದಾಯ ಉಂಟಾಗಲಿದೆ.