ಉಪ್ಪಳ: ಬೇಕೂರು ನಿವಾಸಿ, ಪಂಜುರ್ಲಿ ದೈವದ ಪಾತ್ರಿ ಸುಂದರ (85) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಅಡ್ಕ ಶ್ರೀ ಉಳ್ಳಾಲ್ತಿ ಬಲ್ಲಾರ ಅಣ್ಣಪ್ಪ ಪಂಜುರ್ಲಿ ಧೂಮಾವತಿ ದೈವಸ್ಥಾನ ಪರಂಕಿಲ ಇಲ್ಲಿ ಪಂಜುರ್ಲಿ ದೈವದ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಮಕ್ಕಳಾದ ಸದಾನಂದ, ಸುನೀತಾ, ರೇಖಾ, ಸೊಸೆ ಮಮತಾ, ಅಳಿಯ ಶ್ರೀನಿವಾಸ, ಸಹೋದರ ರತ್ನಾಕರ, ಕೃಷ್ಣ, ಸಹೋದರಿ ಕಮಲ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಪತ್ನಿ ಕಮಲ, ಪುತ್ರ ಶಿವಪ್ಪ, ಸೊಸೆ ಶೈಲಜ, ಅಳಿಯ ದಿನೇಶ್ ಈ ಹಿಂದೆ ನಿಧನಹೊಂದಿದ್ದಾರೆ.