ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯದಲ್ಲಿ ಕೋಮು ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿದ್ದಾರೆಂದು ಕಾಂಗ್ರೆಸ್ ನೇತಾರ ಮುಲ್ಲಪಳ್ಳಿ ರಾಮಚಂದ್ರನ್ ಆರೋಪಿಸಿದ್ದಾರೆ. ಮೂರನೇ ಬಾರಿಯೂ ಅಧಿಕಾರಕ್ಕೇರ ಬಹುದೆಂಬ ವ್ಯಾಮೋಹದಿಂದ ಬಹುಸಂಖ್ಯಾತ ಕೋಮುವಾದವನ್ನು ಪ್ರೋತ್ಸಾಹಿಸುತ್ತಿರುವುದಾಗಿಯೂ ಅವರು ಆರೋಪಿಸಿದರು. ಕಾಂಗ್ರೆಸ್ ನೇತಾರನಾಗಿದ್ದ ಕೆ.ಪಿ.ಕುಂಞಿ ಕಣ್ಣನ್‌ರ ಪ್ರಥಮ ಸಂಸ್ಮರಣಾ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಯುವತಿಯರನ್ನು ಶಬರಿಮಲೆಗೆ ಪ್ರವೇಶಿಸಲು ಮುಂದಾದ ವ್ಯಕ್ತಿಯೇ ಜಾಗತಿಕ ಅಯ್ಯಪ್ಪ ಸಂಗಮ ನಡೆಸುತ್ತಿರುವುದರ ಪ್ರಾಧಾನ್ಯತೆಯೇ ನೆಂದೂ ಮುಲ್ಲಪ್ಪಳ್ಳಿ ಪ್ರಶ್ನಿಸಿದರು. ಕೋಮು ಧ್ರುವೀಕ ರಣದ ವಿಷಯ ದಲ್ಲಿ ಪಿಣರಾಯಿ ಹಾಗೂ ಮೋದಿ ಸಮಾನರು ಎಂದು ಅವರು ತಿಳಿಸಿದರು.ಕಾಸರಗೋಡು ಡಿಸಿಸಿ ನೇತೃತ್ವದಲ್ಲಿ ನಡೆದ ಕೆ.ಪಿ. ಕುಂಞಿಕಣ್ಣನ್ ಸಂಸ್ಮರಣಾ ಸಭೆಯಲ್ಲಿ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಎ. ಗೋವಿಂದನ್, ಹಕೀಂ ಕುನ್ನಿಲ್, ರಮೇಶನ್ ಕರುವಾಚೇರಿ, ಬಿ.ಪಿ. ಪ್ರದೀಪ್ ಕುಮಾರ್, ಪಿ.ಕೆ. ಪ್ರಕಾಶನ್, ವಿಜಯನ್, ಪಿ.ವಿ. ಸುರೇಶ್, ಗೀತಾಕೃಷ್ಣನ್, ವಿ.ಆರ್. ವಿದ್ಯಾನಗರ, ಮೀನಾಕ್ಷಿ ಬಾಲಕೃಷ್ಣನ್, ಗೀತಾಕುಮಾರಿ ಮೊದಲಾದವರು ಮಾತನಾಡಿದರು.
