ಪೊಲೀಸ್ ಠಾಣೆಯಲ್ಲಿ ದಾಂಧಲೆ: ಆರೋಪಿ ಸೆರೆ
ಕುಂಬಳೆ: ಮಧ್ಯರಾತ್ರಿ ವೇಳೆ ಪೊಲೀಸ್ ಠಾಣೆಗೆ ತಲುಪಿ ದಾಂಧಲೆ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೆರುವಾಡ್ ನಿವಾಸಿ ಅಸ್ಕರ್ (೩೦) ಎಂಬಾತ ಬಂಧಿತ ಆರೋಪಿ ಯೆಂದು ಪೊಲೀಸರು ತಿಳಿಸಿದ್ದಾರೆ. ಈತ ಮೊನ್ನೆ ರಾತ್ರಿ ೧೧ ಗಂಟೆ ವೇಳೆ ಕುಂಬಳೆ ಠಾಣೆಗೆ ತಲುಪಿ ದಾಂಧಲೆ ನಡೆಸಿದ್ದಾನೆ. ಕುಂಬಳೆ ಪೇಟೆಯಲ್ಲಿ ತನ್ನ ಮೊಬೈಲ್ ಫೋನ್ ಕಳೆದು ಹೋಗಿದೆಯೆಂದೂ ಅದನ್ನು ಪತ್ತೆ ಹಚ್ಚಿಕೊಡಬೇಕೆಂದು ಒತ್ತಾ ಯಿಸಿ ಈತ ಠಾಣೆಯಲ್ಲಿ ದಾಂಧಲೆ ನಡೆಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.