ಕುಂಬಳೆ: ವಿವಿಧೆಡೆಗಳಲ್ಲಿ ಶಾಲಾ ಪರಿಸರದ ವ್ಯಾಪಾರ ಸಂಸ್ಥೆಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ನಡೆಯುತ್ತಿದೆಯೆಂಬ ಮಾಹಿತಿಯಂತೆ ಅಬಕಾರಿ, ಆರೋಗ್ಯ ಇಲಾಖೆ ಅಧಿಕಾರಿಗಳು ಸಂಯುಕ್ತವಾಗಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ನಾಲ್ಕು ಕಿಲೋ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ಈ ಸಂಬಂಧ ಅಂಗಡಿ ಮಾಲಕನಿಂದ 3000 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಕುಂಬಳೆ ಅಬಕಾರಿ ರೇಂಜ್ ಕಚೇರಿ ಹಾಗೂ ಮಂಜೇಶ್ವರ ಆರೋಗ್ಯ ಇಲಾಖೆ ಅಧಿಕಾರಿಗಳು ಸಂಯುಕ್ತವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಹೊಸಂಗಡಿ, ಉದ್ಯಾವರ, ಕುಂಜತ್ತೂರು ಎಂಬಿಡೆಗಳ ಅಂಗಡಿಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಸಾಮಾಜಿಕ ಆರೋಗ್ಯ ಕೇಂದ್ರ ಹೆಲ್ತ್ ಇನ್‌ಸ್ಪೆಕ್ಟರ್ ಟಿ.ಎಸ್. ದಿಲೀಪ್, ಜ್ಯೂನಿಯರ್ ಹೆಲ್ತ್ ಇನ್‌ಸ್ಪೆಕ್ಟರ್‌ಗಳಾದ ಹಾಶಿಂ, ವಿಪಿನ್ ಶಾಫಿ, ಕುಂಬಳೆ ಅಬಕಾರಿ ಇನ್‌ಸ್ಪೆಕ್ಟರ್ (ಗ್ರೇಡ್) ಎಂ. ಅನೀಶ್ ಕುಮಾರ್, ಸಿವಿಲ್ ಎಕ್ಸೈಸ್ ಆಫೀಸರ್ ಟಿ.ಕೆ. ರಂಜಿತ್, ಚಾಲಕ ಪ್ರವೀಣ್ ಕುಮಾರ್ ಮೊದಲಾದವರು ಕಾರ್ಯಾಚರಣೆ ನಡೆಸಿದ್ದಾರೆ.
