ಅನಧಿಕೃತ ಮರಳುಗಾರಿಕೆ: ಮೂರು ದೋಣಿ ವಶ

ಬೋವಿಕ್ಕಾನ: ಅನಧಿಕೃತ ಮರಳುಗಾರಿಕೆ ವಿರುದ್ಧ ನಡೆಸಲಾ ಗುತ್ತಿರುವ ಕಾರ್ಯಾಚರಣೆಯನ್ನು ಪೊಲೀಸರು  ಇನ್ನಷ್ಟು ತೀವ್ರಗೊಳಿಸಿದ್ದಾರೆ.

ಇದರಂತೆ ಆದೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎ.ಅನಿಲ್ ಕುಮಾರ್ ನೇತೃತ್ವದ ಪೊಲೀಸರು ಪಯಸ್ವಿನಿ ಹೊಳೆಯ ಮುಳಿಯಾರು  ಆಲೂರುಕಡವಿನಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಹೊಳೆಯಿಂದ ಹೊಯ್ಗೆ ತೆಗೆಯಲು ಉಪಯೋಗಿ ಸುತ್ತಿದ್ದ ಮೂರು ದೋಣಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  ಪೊಲೀಸರು ಸ್ಥಳಕ್ಕೆ ಆಗಮಿಸುವ ವೇಳೆ ಈ ದೋಣಿಗಳನ್ನು ಅಲ್ಲಿ ಹಗ್ಗದಿಂದ ಕಟ್ಟಿ  ನಿಲ್ಲಿಸಲಾಗಿತ್ತು. ಈ ಕಡವಿನಿಂದ ರಾತ್ರಿ ವೇಳ ಟಿಪ್ಪರ್ ಲಾರಿಗಳಲ್ಲಿ ಬಾರೀ ಪ್ರಮಾಣದಲ್ಲಿ ಹೊಯ್ಗೆ ಸಾಗಿಸಲಾಗುತ್ತಿದೆ ಎಂಬ ದೂರುಗಳು ಲಭಿಸಿತ್ತು. ಅದರ ಆಧಾರದಲ್ಲಿ   ಪೊಲೀಸರು ನಿನ್ನೆ ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಸ್‌ಐ ಅಜ್ಮಲ್ ಮತ್ತು ಇತರ ಪೊಲೀಸ್ ಸಿಬ್ಬಂದಿಗಳಾದ ಮನೋಜ್, ವಿ. ವಿಜು ಮತ್ತು ಮಧು ಎಂಬವರು ಒಳಗೊಂಡಿದ್ದರು.

You cannot copy contents of this page