ಕಾಸರಗೋಡು: ಕೊಚ್ಚಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾ ಚರ ಣೆಯಲ್ಲಿ ಮಾದಕದ್ರವ್ಯದ ಸಹಿತ ಕಾಸರಗೋಡಿನ ಮೂವರನ್ನು ಬಂಧಿಸಿದ್ದಾರೆ.
ಕಾಸರಗೋಡು ಚೆಂಗಳ ರಹ್ಮತ್‌ನಗರ ಪಚ್ಚಕ್ಕಾಡ್ ವೀಟಿಲ್ ಮೊಹಮ್ಮದ್ ಅನಸ್ (21), ಪೊಯಿನಾಚಿ ಚೆರುಗರೆ ವೀಟಿಲ್ ಖಲೀಲ್ ಬದರುದ್ದೀನ್ (27) ಮತ್ತು ನುಳ್ಳಿಪ್ಪಾಡಿ ಪಿ.ಎಂ.ಎಸ್ ರಸ್ತೆ ಬಳಿಯ ರಿಫಾಯಿ ಮಂಜಿಲ್‌ನ ಎನ್.ಎಚ್. ರಾಬಿಯತ್ (39) ಬಂಧಿತರಾದ ಆರೋಪಿಗಳು ಕೊಚ್ಚಿಯ ನೋರ್ತ್ ಚಿಟ್ಟೂರು ರಸ್ತೆಯ ಅಯ್ಯಪ್ಪನ್‌ಕಾವು ಪರಿಸರದಿಂದ ಕೊಚ್ಚಿ ಸಿಟಿ ಡಾನ್ಸೆಫ್ ಪೊಲೀಸರ ತಂಡ ಇವರನ್ನು ಬಂಧಿಸಿದೆ. ಮಾತ್ರವಲ್ಲದೆ 15.91 ಗ್ರಾಂ ಅಮಲು ಪದಾರ್ಥವನ್ನು ಇವರಿಂದ ಪತ್ತೆಹಚ್ಚಿ ವಶಪ ಡಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.