ಮಾನ್ಯ: ಆರ್‌ಎಸ್‌ಎಸ್ ಬದಿಯಡ್ಕ ಖಂಡ್ ನೀರ್ಚಾಲು ಮಂಡಲದ ವಿಜಯದಶಮಿ ಕಾರ್ಯಕ್ರಮ ಮಾನ್ಯ ಶಾಲಾ ಮೈದಾನದಲ್ಲಿ ನಿನ್ನೆ ನಡೆಯಿತು. ಕಣ್ಣೂರು ವಿಭಾಗ ಪ್ರೌಢ ಪ್ರಮುಖ್ ಓ.ಎಂ. ಶ್ರೀಜಿತ್ ತಲಶ್ಶೇರಿ ಬೌದ್ಧಿಕ್ ನೀಡಿದರು. ಸಾಮಾಜಿಕ ಕಾರ್ಯಕರ್ತ ರಾಮ ಕಾರ್ಮಾರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಬದಿಯಡ್ಕ ಖಂಡ್ ಸಂಘ್ ಚಾಲಕ್ ರಮೇಶ್ ಕಳೇರಿ ಉಪಸ್ಥಿತರಿದ್ದರು. ಮುಂಡೋಡಿನಿಂದ ಮಾನ್ಯ ಪೇಟೆಗೆ ಗಣವೇಷಧಾರಿ ಸ್ವಯಂ ಸೇವಕರ ಪಥ ಸಂಚಲನ ನಡೆಯಿತು.
