ಕಲ್ಲಿಕೋಟೆ: ಕಾಂಗ್ರೆಸ್ ಕಾರ್ಯಕರ್ತನೋರ್ವ ಪಕ್ಷದ ಕಚೇರಿಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಲ್ಲಿಕೋಟೆ ಮೇಪಯೂರ್ ನಿಡುಂಪೊಯಿಲ್ ಕಾಂಗ್ರೆಸ್ ಘಟಕ ಕಚೇರಿಯಲ್ಲಿ ಪರಿಸರ ನಿವಾಸಿಯಾಗಿರುವ ರಾಜನ್ (61) ಎಂಬವರು ಇಂದು ಬೆಳಿಗ್ಗೆ ಪಕ್ಷದ ಕಚೇರಿಯೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇವರು ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರು ಹಾಗೂ ಪತ್ರಿಕೆ ವಿತರಣಾ ಏಜೆಂಟರಾಗಿದ್ದಾರೆ. ಆದರೆ ಅವರ ಸಾವಿಗೆ ಮತ್ತು ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲವೆಂದು ಪಕ್ಷದ ನೇತಾರರು ತಿಳಿಸಿದ್ದಾರೆ.
