ಕಾಸರಗೋಡು: ಅಣಂಗೂರು ಸ್ಕೌಟ್ ಭವನ ಬಳಿಯ ನಿವಾಸಿ ಕೆ.ಎಂ. ಅಬ್ದುಲ್ಲ (67) ಎಂಬವರು ತಳಂಗರೆಯಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇಂದು ಮುಂಜಾನೆ ಮೃತದೇಹ ಕಂಡು ಬಂದಿದೆ. ವಿಷಯ ತಿಳಿದು ತಲುಪಿದ ಪೊಲೀಸರು ಮೃತದೇಹವನ್ನು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಿದ್ದಾರೆ.
ಮಾಹಿನ್ ಫಕ್ರುದ್ದೀನ್ ಎಂಬವರ ಪುತ್ರನಾದ ಮೃತರು ಪತ್ನಿ ಮರಿಯಾಂಬಿ, ಮಕ್ಕಳಾದ ಕಲಂದರ್ ಶಾ, ಶಹನಾಸ್, ಶಬ್ನ, ರಹೀಸ್, ರುಪ್ಸ, ಅಳಿಯ- ಸೊಸೆಯಂದಿರಾದ ಸಹೀದ್, ಇರ್ಶಾದ್, ಫವಾಸ್, ಉಮರುಲ್ ಫಾರೂಕ್, ರಿಸ್ವಾನ್, ಫೈಬೀನ, ಸಹೋದರ- ಸಹೋದರಿ ಯರಾದ ಮುಹಮ್ಮದ್ ಅಸಾದ್, ಅಬ್ದುಲ್ ರಹ್ಮಾನ್, ಖಲೀಲ್, ಬೀವಿ, ಹುಸೈನ್, ಜಮೀಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.