ಕೆರೆಯಲ್ಲಿ ಸ್ನಾನದ ವೇಳೆ ಮೆಡಿಕಲ್ ಶಾಪ್ ಮಾಲಕ ನೀರಿನಲ್ಲಿ ಮುಳುಗಿ ಸಾವು

ಕಾಸರಗೋಡು: ಕುಟುಂಬ ಸದಸ್ಯರ ಜತೆ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ಮೆಡಿಕಲ್ ಶಾಪ್ ಮಾಲಕ ಕೆರೆಯಲ್ಲಿ ಧುಮುಕಿ ಸಾವನ್ನಪ್ಪಿದ ಘಟನೆ ನಡೆದಿದೆ.

ಕುತ್ತಿಕ್ಕೋಲ್ ಪಳ್ಳತ್ತುಂಗಾಲ್ ಪಾಲಕ್ಕುಡಿ ಜೇಮ್ಸ್ (60) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಬೇಡಡ್ಕದ ತೋರ್ ಕುಳತ್ತ್‌ನಲ್ಲಿರುವ ಕೆರೆಯಲ್ಲಿ  ಕುಟುಂಬ ಸದಸ್ಯರೊಂದಿಗೆ ಸ್ನಾನ ಮಾಡುತ್ತಿz ವೇಳೆ ಅವರು ಕೆರೆಗೆ ಧುಮುಕಿದ್ದರು. ನಂತರ ನೀರಿನಿಂದ ಮೇಲಕ್ಕೇರದಿರುವುದನ್ನು ಗಮನಿಸಿದ ಜತೆಗಿದ್ದ ಮಕ್ಕಳು ಮತ್ತು ಇತರರು ತಕ್ಷಣ ಕೆರೆಗಿಳಿದು ಜೇಮ್ಸ್‌ರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.  ಮೃತರು ಬೇಡಡ್ಕ ತಾಲೂಕು ಆಸ್ಪತ್ರೆ ಬಳಿಯ ಮೆಡಿಕಲ್ ಶಾಪ್ ಮಾಲಕ ನಾಗಿದ್ದಾರೆ.   ಜೋಸೆಫ್-ಪೆಣ್ಣಮ್ಮ ದಂಪತಿ ಪುತ್ರನಾಗಿರುವ ಇವರು ಪತ್ನಿ ಲಿಸಿ ಜೇಮ್ಸ್, ಮಕ್ಕಳಾದ ಬ್ರಿಜಿಟ್ ಮರಿಯ ಜೇಮ್ಸ್, ಕುರ‍್ಯಾಕೋಸ್ ಜೇಮ್ಸ್, ಜೋಸೆಫ್ ಜೇಮ್ಸ್, ಸಹೋದರ-ಸಹೋದರಿ ಯರಾದ ಝಾನ್ಸಿ, ಮಿನ್ಸಿ, ಸಿರಿಯಾಕ್, ಜೋಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page