ನವದೆಹಲಿ: ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಕ್ರಿಕೆಟ್ ತಂಡದ ವಿರೋಚಿತ ಗೆಲುವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಎಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪಾಕಿಸ್ತಾನದ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಅಮಾಯಕ ರಾದ 26 ಪ್ರವಾಸಿಗರನ್ನು ಅತಿ ಕ್ರೂರವಾಗಿ ಕೊಂದು ದುಷ್ಕೃತ್ಯಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಪಡೆ ನಡೆಸಿದ ಆಪರೇಷನ್ ಸಿಂಧೂರದೊಂದಿಗೆ ಏಷ್ಯಾಕಪ್‌ನಲ್ಲಿ ಭಾರತ ತಂಡ ಗೆದ್ದಿರುವುದನ್ನು ಹೋಲಿಸಿದ್ದಾರೆ. ಆಪರೇಷನ್ ಸಿಂಧೂರ ಏಷ್ಯಾಕಪ್ ಮೈದಾನದಲ್ಲಿ ನಡೆದ ಆಟದಲ್ಲೂ ನಡೆದಿದೆ. ಆಪರೇಷನ್ ಸಿಂಧೂರ ಮತ್ತು ಈ ಆಟದ ಮೈದಾನದಲ್ಲಿ ನಡೆದ ಫಲಿ ತಾಂಶ ಒಂದೇ ಆಗಿದೆ. ಈ ಎರಡ ರಲ್ಲೂ ಭಾರತ ಗೆದ್ದಿದೆ. ಇದಕ್ಕಾಗಿ ನಮ್ಮ ಕ್ರಿಕೆಟ್ ತಂಡದವರಿಗೆ ಅಭಿ ನಂದನೆಗಳು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ನಿನ್ನೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಭಾರತ 2025ರ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಭಾರತದ ಈ ಗೆಲುವಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಅಭಿನಂದನೆ ಸಲ್ಲಿಸಿದ್ದಾರೆ.
ಎಸಿಸಿ ಅಧ್ಯಕ್ಷರಿಂದ ಏಷ್ಯಾ ಕಪ್ ಪಡೆಯಲು ನಿರಾಕರಿಸಿದ ಭಾರತ
ನವದೆಹಲಿ: 2025ರ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ಪಾಕಿಸ್ತಾನವನ್ನು ಪರಾಭವಗೊಳಿಸಿ ಟೂರ್ನಿ ಭಾರತೀಯ ತಂಡ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿರ ಕೈಯಿಂದ ಟ್ರೋಫಿ ಪಡೆಯಲು ನಿರಾಕರಿಸಿದೆ. ಇದರಿಂದಾಗಿ ಟ್ರೋಫಿ ಪ್ರದಾನ ಅಪೂರ್ಣವಾಯಿತು ಮಾತ್ರವಲ್ಲದೆ ವಿಜೇತ ತಂಡಕ್ಕೆ ಟ್ರೋಫಿ ನೀಡದೆ ನಖ್ವಿ ಮೈದಾನದಿಂದ ನಿರ್ಗಮಿಸಿದರು. ನಖ್ವಿ ಪಾಕಿಸ್ತಾನದ ಗೃಹ ಸಚಿವರೂ ಆಗಿದ್ದಾರೆ.