ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಕುಂಬಳೆ ಸಮೀಪದ ಭಾಸ್ಕರ ನಗರದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟರು.
ಮೂಲತಃ ಕಾಸರಗೋಡು ಅಡ್ಕತ್ತಬೈಲು ನಿವಾಸಿಯೂ ಪ್ರಸ್ತುತ ಬೇಳದಲ್ಲಿ ವಾಸಿಸುವ ಅಜಿತ್ (48) ಎಂಬವರು ಮೃತಪಟ್ಟ ದುರ್ದೈವಿ ಯಾ ಗಿದ್ದಾರೆ. ಇವರು ಕುಂಬಳೆಯ ಟಯರ್ ಅಂಗಡಿಯೊಂದರ ನೌಕರನಾಗಿದ್ದರು. ಮೊನ್ನೆ ರಾತ್ರಿ 9 ಗಂಟೆ ವೇಳೆ ಕೆಲಸ ಮುಗಿಸಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಭಾಸ್ಕರನಗರದಲ್ಲಿ ಮೋರಿ ಸಂಕದ ಬದಿಗೆ ಢಿಕ್ಕಿ ಹೊಡೆದು ಅಪಘಾ ತವುಂಟಾಗಿತ್ತು. ಕಾರು ಮಗುಚಿ ಬಿದ್ದು ಗಂಭೀರ ಗಾಯಗೊಂಡಿದ್ದ ಇವರು ಸ್ಥಳೀಯರು ಕೂಡಲೇ ಕುಂಬಳೆಯ ಆಸ್ಪತ್ರೆಗೆ ತಲುಪಿಸಿ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.
ಅಲ್ಲಿಂದ ನಿನ್ನೆ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿ ದಾಖಲಿ ಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ಇಂದು ಬೆಳಿಗ್ಗೆ ನಿಧನ ಸಂಭವಿಸಿದೆ. ಅಡ್ತತ್ತಬೈಲು ದಿ| ಸುಬ್ರಹ್ಮಣ್ಯ ಎಂಬವರ ಪುತ್ರನಾದ ಮೃತರು ತಾಯಿ ಶಾಂತಾ, ಪತ್ನಿ ಸೌಮ್ಯ( ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯ ದಾದಿ), ಮಕ್ಕಳಾದ ಅನನ್ಯ, ಆನ್ವಿ, ಸಹೋದರ-ಸಹೋದರಿಯರಾದ ಪ್ರದೀಶ್, ಆಶಾ, ರಮ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಅಪಘಾತ ವಲಯವಾದ ಭಾಸ್ಕರನಗರ ರಸ್ತೆ
ಕುಂಬಳೆ: ಕೆಎಸ್‌ಟಿಪಿ ರಸ್ತೆಯಲ್ಲಿ ಕುಂಬಳೆ ಬಳಿ ಭಾಸ್ಕರನಗರದಲ್ಲಿ ವಾಹನ ಅಪಘಾತಗಳು ಪದೇ ಪದೇ ಸಂಭವಿಸುತ್ತಿರುವುದು ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಿದೆ. ಕಳೆದ ಆರು ತಿಂಗಳೊಳಗಾಗಿ ಈ ಪ್ರದೇಶದಲ್ಲಿ 30ರಷ್ಟು ವಾಹನಗಳು ಅಪ ಘಾತಕ್ಕೀಡಾಗಿವೆ. ಭಾಸ್ಕರನಗರದಲ್ಲಿ ವಾಹನಗಳು ತಲುಪುತ್ತಿದ್ದಂತೆ ನಿಯಂತ್ರಣ ತಪ್ಪುವುದೇ ಅಪಘಾತಕ್ಕೆ ಕಾರಣವಾಗುತ್ತಿದೆ.