ಉಪ್ಪಳ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆ ಚಿರುಗೋಳಿ ಜಿ ಎಚ್ ಡಬ್ಲ್ಯೂ ಎಲ್ ಪಿ ಶಾಲೆಯಲ್ಲಿ ಬ್ಯಾಂಕ್‌ನ ಅಧ್ಯಕ್ಷ ಪ್ರೇಮ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಬ್ಯಾಂಕ್‌ನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ವಾರ್ಷಿಕ ವರದಿ, ಆಯವ್ಯಯ ಮತ್ತು 2026 -27ನೇ ವರ್ಷದ ಅಂದಾಜು ಬಜೆಟನ್ನು ಮಂಡಿಸಿದರು.
2024 -25ನೇ ವರ್ಷದ ಬಜೆಟಿಗಿಂತ ಅಧಿಕವಾದ ಖರ್ಚು ಮತ್ತು ಆ ವರ್ಷದ ಲೆಕ್ಕ ಪರಿಶೋಧನಾ ಲೋಪ ದೋಷಗಳ ಬಗ್ಗೆ ಬ್ಯಾಂಕ್‌ನ ಅಧ್ಯಕ್ಷ ವಿವರಿಸಿದರು. ಈ ಸಂದರ್ಭದಲ್ಲಿ ಅನಾಥ ಶವಗಳ ಸಂಸ್ಕಾರ ಕಾರ್ಯ ಮುಖಾಂತರ ಸೇವೆಗೆಯುತ್ತಿರುವ ನಿತ್ಯ ನಿದಿs ಸಂಗ್ರಹಗಾರ ಅನಿಲ್ ಕುಮಾರ್ ರನ್ನು ಸನ್ಮಾನಿಸಲಾಯಿತು. ವೈದ್ಯ ಕೀಯ ಶಿಕ್ಷಣಕ್ಕೆ ಅರ್ಹತೆ ಹೊಂದಿದ ಬ್ಯಾಂಕ್‌ನ ಉಪ್ಪಳ ಶಾಖೆಯ ಮ್ಯಾನೇಜರ್ ಸಚ್ಚಿದಾನಂದ ಶೆಟ್ಟಿ ಅವರ ಪುತ್ರಿ ವೃಷ್ಟಿ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಉಪಾಧ್ಯಕ್ಷ ಭರತ್ ರೈ, ನಿರ್ದೇಶಕ ಮಂಡಳಿ ಸದಸ್ಯ ರವೀಶ, ಸಂಜೀವ, ಐತ, ಜಯಂತ ವಿ, ಅಮಿತ್ ಇ ಎಸ್, ಹರಿನಾಥ್ ಭಂಡಾರಿ, ಹೇಮಾವತಿ, ರಜನಿ, ಅಮಿತ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಸದಸ್ಯ ರಘು ಸಿ. ಸ್ವಾಗತಿಸಿ, ಬ್ಯಾಂಕ್‌ನ ಲೆಕ್ಕ ತಪಾಸಣೆಗಾರ ರಾಜೇಶ್ ಎಸ್.ವಿ. ವಂದಿಸಿದರು. ದಿನೇಶ್ ಮುಳಿಂಜ ನಿರೂಪಿಸಿದರು.