ಸೀತಾಂಗೋಳಿ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್‌ನ 2024-25ನೇ ವರ್ಷದ ವಾರ್ಷಿಕ ಮಹಾಸಭೆ ಬ್ಯಾಂಕ್‌ನ ಪ್ರಧಾನ ಕಚೇರಿಯ ಸಮನ್ವಯ ಸಭಾಭವನದಲ್ಲಿ ಜರಗಿತು. ಅಧ್ಯಕ್ಷ ಶ್ಯಾಮರಾಜ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಶರ ಡಿ ಎಸ್ ಪ್ರಾರ್ಥನೆ ಹಾಡಿದಳು. ಉಪಾಧ್ಯಕ್ಷೆ ಹರಿಣಿ ಜಿ ಕೆ ನಾಯಕ್ ಸ್ವಾಗತಿಸಿದರು. ಬ್ಯಾಂಕಿನ ಕಾರ್ಯದರ್ಶಿ ಶ್ರೀಕೃಷ್ಣ ಭಟ್ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ಹತ್ತನೇ ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿಯೂ ಎ ಪ್ಲಸ್ ಪಡೆದ ಬ್ಯಾಂಕ್‌ನ ಸದಸ್ಯರ ಏಳು ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ನಿರ್ದೇಶಕ ಕೃಷ್ಣ ಪ್ರಸಾದ ವಂದಿಸಿದರು. ಬ್ಯಾಂಕ್‌ನ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸದಸ್ಯರು ಪಾಲ್ಗೊಂಡಿದ್ದರು.
