ಕುಂಬಳೆ: ಕುಂಬಳೆ ಪೇಟೆಯಲ್ಲಿ ಉಂಟಾಗುತ್ತಿರುವ ಸಾರಿಗೆ ಅಡಚಣೆಗೆ ಪರಿಹಾರ ಕಂಡುಕೊಳ್ಳಲು ಹೊಸ ವ್ಯವಸ್ಥೆಗಳೊಂದಿಗೆ ಜ್ಯಾರಿಗೊಳಿಸುವ ಟ್ರಾಫಿಕ್ ಪರಿಷ್ಕರಣೆಯ ಪ್ರಯೋಗ ಅಕ್ಟೋಬರ್ 6ರಿಂದ 16ರವರೆಗೆ ನಡೆಯಲಿದೆ. ಇದು ಯಶಸ್ವಿಯಾದಲ್ಲಿ ಅದನ್ನು ಖಾಯಂ ಆಗಿ ಜ್ಯಾರಿಗೊಳಿಸಲಾಗುವುದು. ಇದರ ಅಂಗವಾಗಿ ಬಸ್, ಆಟೋರಿಕ್ಷಾ, ಟ್ಯಾಕ್ಸಿ, ಗೂಡ್ಸ್ ಕಾರ್ಮಿಕರ ಯೂನಿಯನ್ ಪ್ರತಿನಿಧಿಗಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ಅದರಲ್ಲಿ ಲಭಿಸಿದ ಸಲಹೆ ಸೂಚನೆಗಳಂತೆ ಟ್ರಾಫಿಕ್ ರೆಗ್ಯುಲೇಟರಿ ಕಮಿಟಿ ನಿರ್ಧಾರ ಕೈಗೊಳ್ಳಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
