ಎರಡು ದಿನ ಮದ್ಯದಂಗಡಿಗಳಿಗೆ ರಜೆ: ಕಾಳಸಂತೆಯಲ್ಲಿ ಮದ್ಯ ಮಾರಾಟ ಸಾಧ್ಯತೆ

ಕಾಸರಗೋಡು: ರಾಜ್ಯದಲ್ಲಿ ನಾಳೆ ಹಾಗೂ ಅ.2ರಂದು ಬಿವರೇಜಸ್ ಕಾರ್ಪರೇಶನ್‌ನ ಮದ್ಯದಂಗಡಿಗಳಿಗೆ ರಜೆಯಾಗಿರುವುದರಿಂದ ಈ ಎರಡು ದಿನ ಮದ್ಯಪಾನಿಗಳಿಗೆ ಮದ್ಯ ಲಭಿಸದು. ಪ್ರತಿ ತಿಂಗಳು 1ರಂದು ಡ್ರೈಡೇ ಆಗಿರುವು ದರಿಂದ ನಾಳೆ ಮದ್ಯದಂಗಡಿಗಳಿಗೆ ರಜೆ ಯಾಗಿರುವುದು. ಅ.2ರಂದು ಗಾಂಧೀ ಜಯಂತಿ ಪ್ರಯುಕ್ತ ರಜೆಯಾಗಿರಲಿದೆ. ನಿರಂತರ ಎರಡು ದಿನಗಳ ಕಾಲ ರಜೆಯಾಗಿರುವುದರಿಂದ ಇಂದು ಮದ್ಯದಂಗಡಿಗಳ ಮುಂದೆ ಭಾರೀ ಸಂದಣಿ ಕಂಡು ಬರುವ ಸಾಧ್ಯತೆ ಇದೆ. ಇದೇ ವೇಳೆ ರಜಾದಿನಗಳನ್ನು ಪರಿಗಣಿಸಿ ಕೆಲವರು ಭಾರೀ ಪ್ರಮಾಣದಲ್ಲಿ ಮದ್ಯ ದಾಸ್ತಾನಿರಿಸಿ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಸಾಧ್ಯತೆಯಿದೆ. ಅಂತವರನ್ನು ಪತ್ತೆಹಚ್ಚಲು ತೀವ್ರ ಕಾರ್ಯಾಚರಣೆಗೆ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಕ್ರಮ ಕೈಗೊಂಡಿದೆ.

You cannot copy contents of this page