ಕುಂಬಳೆ: ಕಟ್ಟತ್ತಡ್ಕ ಮುಗುರೋಡ್ ನಿವಾಸಿಯಾದ ಯುವತಿಯೋರ್ವೆ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬಂದ್ಯೋಡು ಅಡ್ಕದ ಫಕ್ರುದ್ದೀನ್ ಎಂಬವರ ಪತ್ನಿ ಆಯಿಶತ್ ಶಾಹಿದ (25) ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ನಿನ್ನೆ ರಾತ್ರಿ 8 ಗಂಟೆಗೆ ಮುಗು ರೋಡ್‌ನಲ್ಲಿರುವ ಸ್ವಂತ ಮನೆಯಿಂದ ಆಯಿಶತ್ ಶಾಹಿದ ನಾಪತ್ತೆಯಾಗಿರುವುದಾಗಿ ತಂದೆಯ ಸಹೋದರ ಅಬ್ದುಲ್ ರಹ್ಮಾನ್ ಎಂಬವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ರಾತ್ರಿ 8 ಗಂಟೆಗೆ ಮನೆಯಿಂದ ಹೊರಗೆ ಹೋದ ಈಕೆ ಮರಳಿ ಬಂದಿಲ್ಲವೆನ್ನಲಾಗಿದೆ.
