ಎಡನೀರು : ಕಾಸರಗೋಡು ಉಪಜಿಲ್ಲಾ ಶಾಲಾ ವಿಜ್ಞಾನ ಮೇಳದ ಲಾಂಛನವನ್ನು ಎಡನೀರು ಸ್ವಾಮೀ ಜೀಸ್ ಹೈಯರ್ ಸೆಕೆಂಡರಿ ಶಾಲೆ ಯಲ್ಲಿ ಚೆಂಗಳ ಪಂಚಾಯತ್ ಅಧ್ಯಕ್ಷ ಖಾದರ್ ಬದ್ರಿಯಾ ಬಿಡುಗಡೆಗೊಳಿ ಸಿದರು. ವಿದ್ಯಾರ್ಥಿಗಳಿಂದ ಲಾಂಛನ ಆಹ್ವಾನಿಸಲಾಗಿತ್ತು. ಇವುಗಳಲ್ಲಿ ಮೊಗ್ರಾಲ್ ಪುತ್ತೂರು ಸರಕಾರಿ ಹೈಯರ್ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿ ಮಹಮ್ಮದ್ ಹನಾನ್ ರಚಿಸಿದ ಲಾಂಛನ ಆಯ್ಕೆಯಾಗಿದೆ. ಬಿಡುಗಡೆ ಸಮಾರಂಭದಲ್ಲಿ ಚೆಂಗಳ ಪಂಚಾಯತ್ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಲೀಂ ಎಡನೀರು, ಕೆ ಎನ್. ಪ್ರಭಾಕರನ್, ಅಧ್ಯಕ್ಷ ಸಜಿ, ಪ್ರವೀಣ್ ಕುಮಾರ್, ಶ್ರೀಪತಿ, ಶ್ರೀಕಲ, ದೀಪ, ರೋಶ್ನ , ಶುಭ, ಆದಿರ, ಶಿಶಿರ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಜ್ಯೋತಿಲಕ್ಷ್ಮಿ ಅಧ್ಯಕ್ಷತೆ ವಹಿಸಿದರು. ಪ್ರಾಂಶುಪಾಲ ಪ್ರಭಾಕರನ್ ಧನ್ಯವಾದ ವಂದಿಸಿದರು.
