ಮಂಜೇಶ್ವರ: ವರ್ಕಾಡಿ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೊ ಆಪರೇಟಿವ್ ಸೊಸೈಟಿಯ 2024 -25ನೇ ಸಾಲಿನ ವಾರ್ಷಿಕ ಮಹಾಸಭೆಯು ವಿಶ್ವ ಪ್ರಭ ಸಭಾಂಗಣದಲ್ಲಿ ನಡೆಯಿತು. ಸೊಸೈಟಿಯ ಅಧ್ಯಕ್ಷ ವಿಶ್ವನಾಥ ಕುದುರು ಅಧ್ಯಕ್ಷತೆ ವಹಿಸಿದರು. ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 60ಶೇ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಧನ ಮತ್ತು ಫಲಕಗಳನ್ನು ನೀಡಿ ಗೌರವಿಸಲಾಯಿತು. ಸೊಸೈಟಿಯ ಹಿರಿಯ ಹಾಗೂ ಅತ್ಯುತ್ತಮ ಕೃಷಿ ಹಾಗೂ ಇನ್ನಿತ ಕ್ಷೇತ್ರಗಳಲ್ಲಿ ಗುರುತಿಸಲ್ಪಟ್ಟ ಸದಸ್ಯರನ್ನು ಶಾಸಕ ಸಿ.ಎಚ್. ಕುಞಂಬು ಗೌರವಿಸಿದರು.
ಸೊಸೈಟಿ ಕಾರ್ಯದರ್ಶಿ ರವೀಂದ್ರ ಮಡ್ವ ವರದಿ, ಲೆಕ್ಕಪತ್ರ ಮಂಡಿಸಿದರು. ಸೊಸೈಟಿಯ ಆಡಳಿತ ಸಮಿತಿ ನಿರ್ದೇಶಕ ಸುಂದರ ಜೋಗಿಬೆಟ್ಟು, ರಮÁನಾಥ ಶೆಟ್ಟಿ, ಭಾರತಿ ಎಸ್. ಸುಳ್ಯಮೆ, ಅಬ್ದುಲ್ ಲತೀಫ್ ಕಲ್ಮಿಂಜ, ಅಬೂಬಕ್ಕರ್ ಸಿದ್ದಿಕ್ ಪಾವೂರು, ವಸಂತ ರೆಂಜೆಪಡ್ಪು, ಶಾಂತರಾಮ ಕೋಳ್ಯೂರು, ಮಾಧವ ಕುದುಕೋರಿ, ಸೀತಾ ಅಂಕದಕಳ, ಪ್ರಮೀಳಾ ವೇಗಸ್ ಆಗ್ರ ಉಪಸ್ಥಿತರಿದ್ದರು. ಬ್ಯಾಂಕ್ ಸದಸ್ಯ ದೇವಪ್ಪ ಶೆಟ್ಟಿ ಮಾಸ್ತರ್, ಗೋಪಾಲಕೃಷ್ಣ ಭಟ್ ಕೋಳ್ಯೂರು ಮಾತನಾಡಿದರು. ಬ್ಯಾಂಕ್ ಕಾರ್ಯದರ್ಶಿ ರವೀಂದ್ರ ಮಡ್ವ ಸ್ವಾಗತಿಸಿ, ಸುಂದರ ಜೋಗಿಬೆಟ್ಟು ವಂದಿಸಿದರು.