ಉತ್ತರ ಕೇರಳದ ಆರೋಗ್ಯ ವಲಯಕ್ಕೆ ಹೊಸ ದಿಶೆ ನೀಡಿ ಆಸ್ಟರ್ ಮಿಮ್ಸ್ ಕಾಸರಗೋಡಿನಲ್ಲಿ ಕಾರ್ಯಾರಂಭ

ಕಾಸರಗೋಡು: ದೇಶದ ಮುಂಚೂಣಿ ಆರೋಗ್ಯ ಸೇವಾದಾತರಾದ ಆಸ್ಟರ್ ಡಿ.ಎನ್. ಹೆಲ್ತ್‌ಕೇರ್‌ನ ಕೇರಳದ 8ನೇ ಆಸ್ಪತ್ರೆ ಇಂದಿರಾನಗರದಲ್ಲಿ ಆರಂಭಗೊಂಡಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಆಸ್ಪತ್ರೆಯನ್ನು ಇಂದು ಬೆಳಿಗ್ಗೆ ದೀಪ ಬೆಳಗಿಸಿ ಉದ್ಘಾಟಿಸಿದರು. 190 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ, 264 ಹಾಸಿಗೆಗಳಿರುವ ಉತ್ತರ ಕೇರಳದ ಆರೋಗ್ಯ ವಲಯಕ್ಕೆ  ಕೊಡುಗೆಗಳನ್ನು ನೀಡಬಹುದಾದ ಸಂಸ್ಥೆಯನ್ನು ಉದ್ಘಾಟಿ ಸಿರುವುದಾಗಿ ಮುಖ್ಯಮಂತ್ರಿ ನುಡಿದರು. 2.1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ 31 ಮೆಡಿಕಲ್ ಸ್ಪೆಷಲಿಸ್ಟ್‌ಗಳಿರುವ ಈ ಆಸ್ಪತ್ರೆಯಲ್ಲಿ ಕಾಸರಗೋಡು ಹಾಗೂ ಸಮೀಪದ ಪ್ರದೇಶದ ಜನರಿಗೆ ಅತ್ಯಂತ ಉತ್ತಮ ಹಾಗೂ ಕೈಗೆಟಕುವ ರೀತಿಯ ಚಿಕಿತ್ಸೆ ಲಭ್ಯಗೊಳಿಸಬೇಕೆಂಬ ಉದ್ದೇಶ ದಲ್ಲಿ ಆಸ್ಪತ್ರೆ ಆರಂಭಿಸಿರುವುದಾಗಿ ಅವರು ನುಡಿದರು.

ಅನುಭವಸ್ಥರಾದ 60ಕ್ಕೂ ಅಧಿಕ ಡಾಕ್ಟರ್‌ಗಳ ತಂಡ ಈ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೇತೃತ್ವ ನೀಡಲಿದೆ. ಉದ್ಘಾ ಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಿದರು. ಆಸ್ಟರ್ ಡಿ.ಎಂ. ಹೆಲ್ತ್‌ಕೇರ್‌ನ ಸ್ಥಾಪಕ ಅಧ್ಯಕ್ಷ ಡಾ| ಆಜಾದ್ ಮೂಪನ್‌ರ ಉಪಸ್ಥಿತಿಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಎಕೆಎಂ ಅಶ್ರಫ್, ಇ. ಚಂದ್ರಶೇಖರನ್, ಸಿ.ಎಚ್. ಕುಂಞಂಬು, ಎಂ. ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಚೆಂಗಳ ಪಂಚಾಯತ್ ಅಧ್ಯಕ್ಷ ಖಾದರ್ ಬದ್ರಿಯ ಭಾಗವಹಿಸಿದರು. ಸಂಸ್ಥೆಯ ಡೈರೆಕ್ಟರ್ ಅನೂಪ್ ಮೂಪನ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ಟಿ.ಜೆ. ವಿಲ್ಸನ್, ಆಸ್ಟರ್ ಕೇರಳ ಕ್ಲಸ್ಟರ್ ಸಿಎಂಎಸ್ ಡಾ| ಸೂರಜ್ ಕೆ.ಎಂ, ಆಸ್ಟರ್ ಮಿಮ್ಸ್ ಕಾಸರಗೋಡು ಮತ್ತು ಕಣ್ಣೂರು ಸಿಒಒ ಡಾ| ಅನೂಪ್ ನಂಬ್ಯಾರ್ ಸಹಿತ ಹಲವು ಗಣ್ಯರು ಭಾಗವಹಿಸಿದರು.

ಸಂಸ್ಥೆಯ ಅಧ್ಯಕ್ಷ ಹಾಗೂ ಸ್ಥಾಪಕನಾದ ಡಾ| ಆಜಾದ್ ಮೂಪನ್ ಮಾತನಾಡಿ, ಉನ್ನತ ಗುಣಮಟ್ಟದಲ್ಲಿ ರುವ ಚಿಕಿತ್ಸೆ, ಎಲ್ಲಾ ಮನುಷ್ಯರಿಗೂ ಏಕಪ್ರಕಾರವಾಗಿ ಲಭ್ಯಗೊಳಿಸುವುದು ಎಂಬುದಾಗಿದೆ ಆಸ್ಟರ್ ಡಿ.ಎಂ. ಹೆಲ್ತ್‌ಕೇರ್‌ನ ಗುರಿ ಎಂದು ನುಡಿದರು. ಕೇರಳದ ೮ನೇ ಆಸ್ಪತ್ರೆಯಾದ ಆಸ್ಟರ್ ಮಿಮ್ಸ್ ಕಾಸರಗೋಡಿನ ಪ್ರಧಾನ ಮೈಲುಗಲ್ಲಾಗಲಿದೆ. ಅತ್ಯಾಧುನಿಕ ಸೌಕರ್ಯಗಳೊಂದಿಗೆ ತಜ್ಞರಾದ ಡಾಕ್ಟರ್‌ಗಳು 1.5 ಟಿ ಎಂಆರ್‌ಐ, 160 ಸ್ಲೈಸ್ ಸಿಟಿ ತಾಂತ್ರಿಕ ವಿದ್ಯೆ ಎಂಬಿವು ಲಭ್ಯಗೊಳಿಸುವ ಜಿಲ್ಲೆಯ ಮೊದಲ ಕೇಂದ್ರ ಈ ಆಸ್ಪತ್ರೆಯಾಗಿದೆ ಎಂದು ಅವರು ನುಡಿದರು. ಹೃದಯ, ರಕ್ತನಾಳಗಳ ಶಸ್ತ್ರಚಿಕಿತ್ಸೆಗಳಿಗೆ, ಗಂಭೀರವಾದ ಹೃದಯ- ಶ್ವಾಸಕೋಶ ಸಂಬಂಧವಾದ ತೊಂದರೆಗಳಿಗೆ ಎಕ್ಮೋ, ಇಸಿಎಲ್‌ಎಸ್ ಚಿಕಿತ್ಸೆಗೆ ವಿಫುಲವಾದ ಸೌಕರ್ಯವನ್ನು ಹಾಗೂ ಹೆಮಡ್ ಸೋರ್ಪ್ಶನ್ (ಹಾವು ಕಚ್ಚಿದರೆ ಪ್ರತ್ಯೇಕ ಚಿಕಿತ್ಸೆ) ಸಹಿತ ವಿವಿಧ ವಿಭಾಗಗಳ ಅತ್ಯಾಧುನಿಕ ತುರ್ತು ಚಿಕಿತ್ಸೆಗಳನ್ನು ಇಲ್ಲಿ ಸಜ್ಜುಗೊಳಿಸಲಾಗಿದೆ ಎಂದರು. 24 ಗಂಟೆಯೂ ಆಂಬುಲೆನ್ಸ್ ಸೌಕರ್ಯ ಹಾಗೂ 20 ಹಾಸಿಗೆಗಳಿ ರುವ ತುರ್ತು ವಿಭಾಗ, 44 ತೀವ್ರ ನಿಗಾ ಘಟಕ ಹಾಸಿಗೆಗಳು ಸಹಿತ ವಿವಿಧ ಸೌಕರ್ಯಗಳನ್ನು ಇಲ್ಲಿ ಏರ್ಪಡಿಸಲಾಗಿದೆ ಎಂದು ಆಜಾದ್ ಮೂಪನ್ ತಿಳಿಸಿದ್ದಾರೆ.

You cannot copy contents of this page