ಲಿಫ್ಟ್‌ನಲ್ಲಿ ಸಿಲುಕಿದ 4ಮಂದಿ ಯುವಕರನ್ನು ರಕ್ಷಿಸಿದ ಉಪ್ಪಳ ಅಗ್ನಿಶಾಮಕದಳ

ಉಪ್ಪಳ: ಫ್ಲಾಟ್‌ವೊಂದರ ಲಿಫ್ಟ್ ಹಾನಿಯಾಗಿ ಅದರೊಳಗೆ ಸಿಲುಕಿಕೊಂಡ 4 ಮಂದಿ ಯುವಕ ರನ್ನು ಉಪ್ಪಳ ಅಗ್ನಿಶಾಮಕದಳ ರಕ್ಷಿಸಿದ ಘಟನೆ ನಡೆದಿದೆ. ಉಪ್ಪಳ ಬಸ್ ನಿಲ್ದಾಣ ಬಳಿಯಿರುವ ಫ್ಲ್ಲಾಟ್‌ವೊಂದರಲ್ಲಿ ನಿನ್ನೆ ರಾತ್ರಿ ಸುಮಾರು 7ರಿಂದ 8 ಗಂಟೆ ಮಧ್ಯೆ  ಕೆಳ ಅಂತಸ್ತಿನಿಂದ ನಾಲ್ಕು ಮಂದಿ ಯುವಕರು ಲಿಫ್ಟ್‌ಗೆ ಹತ್ತಿದ್ದರು. ಎರಡನೇ ಅಂತಸ್ತಿಗೆ ತಲುಪುವ ಮಧ್ಯೆ ಲಿಫ್ಟ್ ಹಾನಿಗೊಂಡು ನಿಂತಿದೆ. ಈ ವೇಳೆ ಗಾಬರಿಗೊಂಡ ಯುವಕರು ಫ್ಲಾಟ್‌ನ ಇತರರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಉಪ್ಪಳದಿಂದ ಅಗ್ನಿಶಾಮಕದಳ ತಲುಪಿ ಅರ್ಧದಲ್ಲಿ ನಿಂತಿರುವ ಲಿಫ್ಟ್‌ನ್ನು ಎರಡನೇ ಅಂತಸ್ತಿಗೆ ತಲುಪಿಸಿ ಅವರನ್ನು  ಹೊರಗೆ ತಂದು ರಕ್ಷಿಸಿದ್ದಾರೆ. ಅಗ್ನಿಶಾಮಕದಳದ ಸ್ಟೇಶನ್ ಆಫೀಸರ್ ಸಂದೀಪ್, ಸಿಬ್ಬಂದಿಗಳಾದ ವಿಷ್ಣು, ಶ್ರೀಜಿತ್, ವಿಬಿನ್, ಮ್ಯಾಥ್ಯೂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರೆ.

You cannot copy contents of this page