ವಿದ್ಯಾರಂಭ: ಕ್ಷೇತ್ರಗಳಲ್ಲಿ ಭಕ್ತರ ಸಂದಣಿ

ಕಾಸರಗೋಡು: ಇಂದು ವಿಜಯದಶಮಿ  ಅರಿವಿನ ಮೊದಲ ಅಕ್ಷರ ದಾಖಲಿಸಿ ಚಿಣ್ಣರು ವಿದ್ಯಾರಂಭ ನಡೆಸಿದರು. ವಿವಿಧ  ಕ್ಷೇತ್ರಗಳಲ್ಲಿ, ಕೆಲವು ಸಂಸ್ಥೆಗಳಲ್ಲಿ ಮಕ್ಕಳಿಗೆ ವಿದ್ಯಾರಂಭ ಕೈಗೊಳ್ಳುವ ಕಾರ್ಯಕ್ರಮ ಇಂದು ನಡೆಸಲಾಗಿದೆ. ದೇವಿ ಮಹಿಷಾಸುರನನ್ನು ಕೊಂದು ಅಧರ್ಮವನ್ನು ತೊಡೆದುಹಾಕಿ ಧರ್ಮವನ್ನು ಸ್ಥಾಪಿಸಿದ ವಿಜಯ ಸಂಕೇತವಾಗಿ ಇಂದು ವಿಜಯದಶಮಿ ಆಚರಿಸಲಾಗುತ್ತಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕಟೀಲು ಕ್ಷೇತ್ರ ಸಹಿತ ಜಿಲ್ಲೆಯ ಪ್ರಧಾನ ಹಲವು ದೇವೀ ಕ್ಷೇತ್ರಗಳಲ್ಲಿ ವಿದ್ಯಾರಂಭಕ್ಕೆ ಭಕ್ತರ ದಟ್ಟಣೆ ಕಂಡುಬಂದಿದೆ. ಜೊತೆಗೆ ದಶಮಿ ಪ್ರಯುಕ್ತ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ನಡೆಯಿತು.

You cannot copy contents of this page