ಕಣ್ಣೂರು: ಕಣ್ಣೂರು ಸಮೀಪದ ಚೆರುಕುನ್ನಿನಲ್ಲಿ ಬಿಜೆಪಿ ನೇತಾರನ ಮನೆಗೆ ದುಷ್ಕರ್ಮಿಗಳು ಬಾಂಬೆಸೆದು ಹಾನಿಗೊಳಿಸಿದ್ದಾರೆ.
ಬಿಜೆಪಿಯ ಕಲ್ಯಾಶ್ಶೇರಿ ಮಂಡಲ ಪ್ರಧಾನ ಕಾರ್ಯದರ್ಶಿ ಕೆ. ಬಿಜುರ ಮನೆಗೆ ಇಂದು ಮುಂಜಾನೆ 2.30ರ ವೇಳೆ ಬಾಂಬೆಸೆಯಲಾಗಿದೆ. ಒಂದರ ಬಳಿಕ ಒಂದರಂತೆ ಮೂರು ಬಾಂಬ್ ಗಳನ್ನು ಈ ಮನೆಗೆ ಎಸೆಯಲಾಗಿದೆ. ಇದರಿಂದ ಮನೆಯ ಕಿಟಿಕಿ ಗಾಜುಗಳು ಪುಡಿಗೈಯ್ಯಲ್ಪಟ್ಟಿವೆ. ಮಾತ್ರವಲ್ಲದೆ ಮನೆಗೆ ಬಾರೀ ಹಾನಿ ಉಂಟಾಗಿದೆ.
ವಿಷಯ ತಿಳಿದ ಕಣ್ಣಾಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಬಾಂಬೆಸೆದವರು ಯಾರು ಮತ್ತು ಅದರ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟಗೊಂಡಿಲ್ಲ. ಅದನ್ನು ಬೇಧಿಸುವ ಯತ್ನದಲ್ಲಿ ಪೊಲೀಸರು ತೊಡಗಿದ್ದಾರೆ. ರಾಜಕೀಯ ದ್ವೇಷದಿಂದ ದಾಳಿ ನಡೆಸಲಾಗಿದೆಯೇ ಎಂಬ ಬಗ್ಗೆಯೂ ಪೊಲೀಸರು ಇನ್ನೊಂ ದೆಡೆ ತನಿಖೆ ನಡೆಸುತ್ತಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.