ಯುವ ನ್ಯಾಯವಾದಿ ಕಚೇರಿಯೊಳಗೆ ನೇಣು ಬಿಗಿದು ಸಾವಿಗೀಡಾದ ಘಟನೆ: ತನಿಖೆ ಆರಂಭ; ಮೊಬೈಲ್ ಫೋನ್ ಪೊಲೀಸ್ ಕಸ್ಟಡಿಗೆ

ಕುಂಬಳೆ: ಯುವ ನ್ಯಾಯ ವಾದಿ ಯೊಬ್ಬರು ತನ್ನ ಕಚೇರಿ ಯೊಳಗೆ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುರಿತು ಪೊಲೀಸರು  ತನಿಖೆ ತೀವ್ರಗೊ ಳಿಸಿದ್ದಾರೆ.

ಯುವ ನ್ಯಾಯವಾದಿ, ಪ್ರಜಾ ಪ್ರಭುತ್ವ ಮಹಿಳಾ ಅಸೋಸಿ ಯೇಶನ್‌ನ ಕುಂಬಳೆ ಏರಿಯಾ ಕಮಿಟಿ ಸದಸ್ಯೆ ಹಾಗ ವಿಲ್ಲೇಜ್ ಕಾರ್ಯದರ್ಶಿಯೂ ಆಗಿರುವ ಬತ್ತೇರಿಯ ಸಿ. ರಂಜಿತ ಕುಮಾರಿ (30) ಅವರ ಸಾವಿನ ಕುರಿತು ತನಿಖೆ ನಡೆಯುತ್ತಿದೆ.

ಮುಟ್ಟಂ ಬೇರಿಕೆ ನಿವಾಸಿಯಾದ ಕೃತಶ್ ಎಂಬವರ ಪತ್ನಿಯಾದ ರಂಜಿತ ಕುಮಾರಿ ಕಾಸರ ಗೋಡು ನ್ಯಾಯಾಲಯದಲ್ಲಿ ನ್ಯಾಯವಾದಿ ಯಾಗಿ ಸೇವೆ ಸಲ್ಲಿಸುತ್ತಿ ದ್ದರು. ಮೊನ್ನೆ  ರಾತ್ರಿ ವೇಳೆ  ಇವರು ಕುಂಬಳೆಯ ಕೊಟ್ಟೂಡಲ್  ಸ್ಕ್ವಾಯ ರ್‌ನಲ್ಲಿರುವ ತನ್ನ ಕಚೇರಿಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೊನ್ನೆ ಸಂಜೆಯಿಂದ  ಇವರಿಗೆ ಮನೆಯವರು ನಿರಂತರ ಫೋನ್ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ ವೆನ್ನಲಾಗಿದೆ. ಇದರಿಂದ ಹಿನ್ನೆಲೆಯಲ್ಲಿ ಸಂಬಂಧಿಕರು ಕುಂಬಳೆಯಲ್ಲಿರುವ ಕಚೇರಿಗೆ ಬಂದಿದ್ದರು. ಈ ವೇಳ ಬಾಗಿಲು ಮುಚ್ಚಿದ್ದು, ಒಳಗಿನಿಂದ ಚಿಲಕ ಹಾಕಿರುವುದು ತಿಳಿದು ಬಂದಿದೆ.  ಈ ಬಗ್ಗೆ ಸಂಬಂಧಿಕರು ನೀಡಿದ ಮಾಹಿತಿಯಂತೆ ಪೊಲೀಸರು ತಲುಪಿ ಬಾಗಿಲು ಮುರಿದು ಒಳಗೆ ಪ್ರವೇಶಿಸಿ ನೋಡಿದಾಗ ರಂಜಿತ ಕುಮಾರಿ ಫ್ಯಾನ್‌ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಮೃತದೇಹವನ್ನು ನಿನ್ನೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ  ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಂಬಳ ಪೇಟೆಯಲ್ಲಿ ಸಾರ್ವಜನಿಕ ದಶನಕ್ಕಿರಿಸಲಾಯಿತು. ಅನಂತರ ಬೇರಿಕೆಯಲ್ಲಿರುವ ಮನೆ ಹಿತ್ತಿಲಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಕುಂಬಳೆ ಬತ್ತೇರಿಯ ಚಂದ್ರನ್-ವಾರಿಜಾಕ್ಷಿ ದಂಪತಿಯ ಪುತ್ರಿಯಾದ ರಂಜಿತ ಕುಮಾರಿ ಪತಿ, ಪುತ್ರ ಶ್ರೀಜನ್, ಸಹೋದರ ಸುಜಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  ಇನ್ನೋರ್ವ ಸಹೋದರ ಡಿವೈಎಫ್‌ಐ ನೇತಾರನಾಗಿದ್ದ ಅಜಿತ್ ಎಂಬವರು ವರ್ಷಗಳ ಹಿಂದೆ ಕರ್ನಾಟಕದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸುತ್ತಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ರಂಜಿತ ಕುಮಾರಿಯ ಸಾವಿನಿಂದ ನಾಡಿನಲ್ಲಿ  ಶೋಕ ಸಾಗರ ಸೃಷ್ಟಿಯಾಗಿದೆ. ಇದೇ ವೇಳೆ ರಜಿತ ಕುಮಾರಿಯ ಸಾವಿನ ಕುರಿತು ತನಿಖೆಯಂಗವಾಗಿ ಅವರ ಮೊಬೈಲ್ ಫೋನ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.  ಸಾವಿಗೆ ಕಾರಣವಾದ ಯಾವುದಾದರೂ  ಸೂಚನೆ ಮೊಬೈಲ್ ಫೋನ್ ಪರಿಶೀಲಿಸಿದರೆ ಲಭಿಸಬಹುದೇ ಎಂದು ನಿರೀಕ್ಷಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page