ಹೊಸದುರ್ಗ: ಪರಿಶಿಷ್ಟ ವಿಭಾಗದವರಿಗಾಗಿ ರಾಜ್ಯ ಸರಕಾರ ವಿವಿಧ ಯೋಜನೆಗಳನ್ನು ಜ್ಯಾರಿಗೊ ಳಿಸುತ್ತಿರುವಾಗ ಕೇಂದ್ರ ಸರಕಾರ ಸೌಲಭ್ಯಗಳನ್ನು ಇಲ್ಲದಂತೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದರು. ಸಾಮಾಜಿಕ ಐಕ್ಯದಾರ್ಢ್ಯ ಪಾಕ್ಷಿಕಾಚರಣೆಯ ರಾಜ್ಯ ಮಟ್ಟದ ಉದ್ಘಾಟನೆ ನಿರ್ವಹಿಸಿ ಅವರು ಮಾತನಾಡುತ್ತಿದ್ದರು.
ಪರಿಶಿಷ್ಟ ವಿಭಾಗದವರ ಕ್ಷೇಮಕ್ಕಾಗಿ ಬಜೆಟ್‌ನಲ್ಲಿ 12.7 ಶೇ. ಮೊತ್ತವನ್ನು ಮೀಸಲಿಡಲಾಗಿದೆ. 6.3 ಶೇ. ಮಾತ್ರವೇ ಕೇಂದ್ರ ಮೀಸಲಿಡುವುದು. ಲೈಫ್ ಯೋಜನೆಯಲ್ಲಿ 4.5 ಲಕ್ಷಕ್ಕೂ ಅಧಿಕ ಮನೆಗಳಲ್ಲಿ 28 ಶೇ.ವನ್ನು ಪರಿಶಿಷ್ಟ ವಿಭಾಗದವರಿಗೆ ಲಭ್ಯಗೊಳಿಸಿರುವುದಾಗಿ ಮುಖ್ಯಮಂತ್ರಿ ತಿಳಿಸಿದರು. ಸಚಿವ ಒ.ಆರ್. ಕೇಳು ಅಧ್ಯಕ್ಷತೆ ವಹಿಸಿದರು. ಸಚಿವ ಎ.ಕೆ. ಶಶೀಂದ್ರನ್ ಭಾಗವಹಿಸಿದರು. ಅಧ್ಯಯನ ಕೊಠಡಿ ಧನ ಸಹಾಯ ವಿತರಣೆಯ ರಾಜ್ಯ ಮಟ್ಟದ ಉದ್ಘಾಟನೆಯನ್ನು ಕಾಞಂಗಾಡ್ ಅರಯಿ ಕಾರ್ತಿಕ ನಗರದಲ್ಲಿ ಚಂದ್ರಜಿತ್‌ಗೆ ಚೆಕ್ ಹಸ್ತಾಂತರಿಸಿ ಮುಖ್ಯಮಂತ್ರಿ ನಿರ್ವಹಿಸಿದರು. ಟ್ರೈಬಲ್ ಪ್ಲಸ್ ಯೋಜನೆಯಲ್ಲಿ ಅತ್ಯಂತ ಹೆಚ್ಚು ಉದ್ಯೋಗ ದಿನಗಳನ್ನು ಲಭ್ಯಗೊಳಿಸಿ ಮಹಾತ್ಮಾ ಗೋತ್ರ ಸಮೃದ್ಧಿ ಪುರಸ್ಕಾರಕ್ಕೆ ಅರ್ಹವಾದ ಪಾಲಕ್ಕಾಡ್ ಅಗಳಿ, ಶೋಲಯೂರ್, ಪುತ್ತೂರು ಪಂಚಾಯತ್‌ಗಳಿಗೆ ಮುಖ್ಯಮಂತ್ರಿ ಯಥಾಕ್ರಮ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಸ್ತಾಂತರಿಸಿದರು. ಸಂಪೂರ್ಣ ಪರಿಶಿಷ್ಟ ಪಂಗಡ ಕುಟುಂಬಗಳಿಗೆ ಮೂಲ ದಾಖಲೆಗಳನ್ನು ಲಭ್ಯಗೊಳಿಸಿ ಡಿಜಿಟೈಸ್ ಮಾಡಿದ ಎಬಿಸಿಡಿ ಯೋಜನೆಯ ಜಿಲ್ಲಾ ಮಟ್ಟದ ಪೂರ್ತೀಕರಣ ಘೋಷಣೆ ಜಿಲ್ಲಾಧಿಕಾರಿ ಕೆ. ಇಂಬಶೇಖರ್‌ಗೆ ಪ್ರಮಾಣಪತ್ರ ನೀಡಿ ಮುಖ್ಯಮಂತ್ರಿ ನಿರ್ವಹಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರು ಸಹಿತ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದರು.