ಆದ್ಯಂತ್ ಅಡೂರಿಗೆ ದಸರಾ ಕವಿ ಸಾಧಕ ಪ್ರಶಸ್ತಿ

ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವದಲ್ಲಿ ಕಾಸರಗೋಡು ದಸರಾ ಕವಿ ಸಾಧಕ ಪ್ರಶಸ್ತಿಯನ್ನು ಆದ್ಯಂತ್ ಅಡೂರಿಗೆ  ನೀಡಿ ಗೌರವಿಸಲಾಯಿತು. ತಬಲಾ ವಾದನ, ಗಾಯನ, ಚಿತ್ರಕಲೆ,ಸಾಹಿತ್ಯ, ಭಜನೆ, ಕ್ರೀಡೆ ಮೊದಲಾದ ಕ್ಷೇತ್ರದಲ್ಲಿ ಪ್ರತಿಭೆ ತೋರಿದ ಈತ ಅಡೂರು ಸರಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ. ಮಂಗಳೂರು ಆಕಾಶವಾಣಿಯ ಬಾಲವೃಂದ ವಿಭಾಗದಲ್ಲಿ  ಈತನ ಸಂದರ್ಶನ ಪ್ರಸಾರವಾಗಿದೆ.  ಚಟುಚುಟುಕು  ಪ್ರಕಟಿತ ಚುಟುಕು ಸಂಕಲನ, ಕನ್ನಡ ಭವನದ ಭರವಸೆಯ ಬೆಳಕು ಪ್ರಶಸ್ತಿ, ಕಲ್ಕೂರಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಪುರಸ್ಕಾರಗಳನ್ನು ಪಡೆದ ಈತ ಪತ್ರಕರ್ತ ವಿರಾಜ್ ಅಡೂರು-ಜಯಲಕ್ಷ್ಮಿ ದಂಪತಿ ಪುತ್ರನಾಗಿದ್ದಾನೆ.

You cannot copy contents of this page